ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಾದಕ ವಸ್ತುಗಳ ಸೇವನೆ ದುಶ್ಚಟ, ನರಕಕ್ಕೆ ದಾರಿ ತೋರಿಸುತ್ತದೆ. ಅದಲ್ಲದೇ ಯುವಕರು ದೇಶ ಆಸ್ತಿ, ಸಂಪತ್ತು ಸದ್ದಿಲ್ಲದೆ ಹಾಳಾಗುತ್ತೀರುವುದು ಅತ್ಯಂತ ಕಳವಳಕಾರಿ ಎಂದು ಬಿ ಎಚ್ ಇ ಓ ವೈ ಎಂ ಪೂಜಾರಿ ಹೇಳಿದರು.
ತಾಲೂಕಿನ ಲಚ್ಯಾಣ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿರುವ ಮಾದಕ ದ್ರವ್ಯ ಹಾವಳಿ ನಿಯಂತ್ರಣ ಅರಿವು ಕಾರ್ಯಕ್ರಮ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರೌಢಾವಸ್ಥೆಯಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗಿ ಸದ್ದಿಲ್ಲದೆ ಹಾಳಾಗುತ್ತಿರುವದು ಅತ್ಯಂತ ನೋವಿನ ಸಂಗತಿ. ಇದು ಗ್ರಾಮ, ರಾಜ್ಯ, ದೇಶಕ್ಕೆ ಗಂಡಾಂತರ ಸಮಸ್ಯೆ ಎಂದು ಹೇಳಿದರು.
ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವ ಮೂಲಕ ಬದುಕು ರೂಪಿಸುವುದು ಅನಿವಾರ್ಯವಾಗಿದೆ. ಪದವಿ ಪೂರ್ವ ಪಿಯುಸಿ ತನಕ ಮಕ್ಕಳ ಮನಸ್ಸು ಗೊಂದಲದ ಗೂಡಾಗಿರುತ್ತದೆ. ಹಾಗಾಗಿ ಈ ಬಗ್ಗೆ ಕುಟುಂಬ, ಸಮಾಜ ಹಾಗೂ ಶಿಕ್ಷಕರು ಜಾಗೃತಿವಹಿಸಬೇಕೆಂದು ಹೇಳಿದರು.
ಎಂಎಫ್ ದರ್ಗಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಾತನಾಡುತ್ತಾ, ಬಾಲ್ಯ ವಿವಾಹಗಳು ತಡೆಗಟ್ಟಲು ಸಮುದಾಯದಲ್ಲಿ ಮೂಢನಂಬಿಕೆ ತಪ್ಪು ಕಲ್ಪನೆ ಹೋಗಲಾಡಿಸಲು ಅರಿವು ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಸಂಘ-ಸಂಸ್ಥೆಗಳು ಸಹಕಾರ ಮಾಡಬೇಕೆಂದು ಹೇಳಿದರು.
ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

