ಉದಯರಶ್ಮಿ ದಿನಪತ್ರಿಕೆ
ಚಡಚಣ: ಶ್ರೀ ಗುರುಚಂದ್ರಶೇಖರ ಸಂಸ್ಥಾನ ಹಿರೇಮಠ ತದ್ದೇವಾಡಿಯಲ್ಲಿ ನಡೆಯುವ ಗುರುಪೂರ್ಣಿಮೆ ನಿಮಿತ್ಯ ಪ್ರತಿ ವರ್ಷ ಐದು ಗ್ರಾಮಗಳಿಂದ ಜ್ಯೋತಿ ತಂದು ಪ್ರಾರಂಭೋತ್ಸವ ಮಾಡುತ್ತ ಬಂದಿದ್ದು, ಈ ವರ್ಷ ಬಳ್ಳೋಳ್ಳಿ ಗ್ರಾಮ ದೇವರು ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಜ್ಯೋತಿ ತದ್ದೆವಾಡಿಗೆ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ರೇಣುಕ ದೇವರು ಮಹಾಸ್ವಾಮಿಗಳ ಮತ್ತು ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಇವರ ಸಹಯೋಗದಲ್ಲಿ ಚಾಲನೆ ನೀಡಲಾಯಿತು.
ತದ್ದೇವಾಡಿ ಗ್ರಾಮದ ವೇದ ಮೂರ್ತಿ ಮಹಾಂತೇಶ್ ಹಿರೇಮಠ ಇವರು ಮಾತನಾಡಿ ಮಠದಲ್ಲಿ ಜೂನ್ ೨೬ ರಿಂದ ಜೂಲೈ ೧೦ರ ವರೆಗೆ ಪುರಾಣ ಪ್ರವಚನ, ಕೃಷಿ ಚಿಂತನ, ವೀರ ಯೋಧರಿಗೆ ಸನ್ಮಾನ ಸಮಾರಂಭ, ರಕ್ತದಾನ ಶಿಬಿರ, ಅಕಾಡೆಮಿ ವತಿಯಿಂದ ಜಾನಪದ ವೈಭವ ಸಮ್ಮೇಳನ, ಕಲಾ ಸಮ್ಮೇಳನ, ನೂರಾರು ಕಲಾವಿದರಿಗೆ ಪ್ರೋತ್ಸಾಹ ಹಾಗೂ ಸನ್ಮಾನ, ಪ್ರಶಸ್ತಿ ಪ್ರಮಾಣ ಪತ್ರಿಕೆ ವಿತರಣೆ, ಸುಪ್ರಸಿದ್ದ ಡೊಳ್ಳಿನ ಪದಗಳು, ನಾಟಕ, ಜಾನಪದ ತಂಡಗಳಿಂದ ಕಲಾ ಪ್ರದರ್ಶನ ಮುಂತಾದ ಕಾರ್ಯಕ್ರಮ ಈ ವರ್ಷವೂ ಕೂಡಾ ಹಮ್ಮಿಕೊಳ್ಳಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಳ್ಳೋಳ್ಳಿ ಗ್ರಾಮದ ಶರಣಯ್ಯ ಹಿರೇಮಠ, ಬಳ್ಳೊಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಕಾಮಣ್ಣಗೌಡ ಬಿರಾದಾರ, ಈರಣ್ಣ ವಾಲಿ, ಸದಾಶಿವ ರೇವತಾಗಾಂವ, ಅನಿಲಗೌಡ ಪಾಟೀಲ, ಅಶೋಕ ತೋಟದಾರ, ಪ್ರಕಾಶ ಪಾಟೀಲ, ಶರಣಯ್ಯ ಮಠಪತಿ, ವಿಠ¯ ಶಿರಶ್ಯಾಡ, ಹಾಗೂ ತದ್ದೆವಾಡಿ, ಬಳ್ಳೋಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
