ರಚನೆ
– ಸುವರ್ಣ ಕುಂಬಾರ
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ನಯನಗಳ ಸಂಗೀತಕೆ ಒಲವಿನ ಸಂಚಲನ
ಹೃದಯದ ವಿನಿಮಯ ಪ್ರೇಮಾನುರಾಗದ ಮಿಲನ
ಮಾತುಗಳು ಮೌನವಾದಾಗಲೆ ಚೈತನ್ಯದ ಗಾನ
ದಮನಿಯ ಲಯದಲ್ಲಿ ಇಬ್ಬರಕನಸ್ಸುಗಳಿಗೆ ಜೀವನ
ಸಾಗುವ ಪಥಗಳಲ್ಲಿ ಬದುಕಿನ ಸರಿಗಮವು
ಗುನುಗೋಣವೇ ಜನ್ಮ ಜನ್ಮಕ್ಕೂ ಒಲವು
ಭಾವಾಂತರಂಗದಲ್ಲಿ ಪ್ರೀತಿಯ ಅದ್ಬುತ ಚೆಲುವು
ನಮ್ಮೊಲವೇ ಈ ಬಾಳ್ವೆಗೆ ಭದ್ರವಾದ ನಿಲುವು
ಅಂತರ ಅಳೆಯುತ ಆತ್ಮಗಳಲ್ಲಿ ಬೆರೆತೆವು
ಒಲವ ಯಾನದ ಸುಂದರ ಗಾನದ ಮುತ್ತಾದೆವು
ಎರಡಳೆದು ಒಂದಾದ ಸವಿನಯ ಭಾವವು
ಉಸಿರು ಉಸಿರಿನಲಿ ನಮ್ಮೊಲವಿನ ಕಾವು.


