ರಚನೆ
– ಜಯಂತಿ ಎಸ್ ಭಟ್ಟ
ಶಿರಾಲಿ
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ತನ್ನೆಲ್ಲ ಕನಸು ಕಾಣುತ ಮಕ್ಕಳಲಿ
ತನ್ನವರಿಗಾಗಿ ಜೀವ ಸವೆದವನು
ನೋವನೆಲ್ಲ ಮರೆಮಾಚಿ ತನ್ನಲಿ
ಖುಷಿ ಹಂಚುತ ನಗು ಚೆಲ್ಲಿದವನು
ಗಂಭೀರ ಮುಖ ಮುದ್ರೆಯಲಿ
ಜೀವನದ ಪಾಠವ ಕಲಿಸಿದವನು
ತನ್ನ ಬಯಕೆಗಳ ಸಾಯಿಸುತಲಿ
ತನ್ನವರ ಬಯಕೆ ತೀರಿಸಿದವನು
ತಾನು ಕಾಣದ ಸುಂದರ ಲೋಕದಿ
ನಮಗಾಗಿ ಭವ್ಯ ಚಿತ್ತಾರ ಗೀಚಿದನು
ಸೋತಿಹೆವು ನಾವು ಶಬ್ದಕೋಶದಿ
ಪದವ ತರಲು ಅಪ್ಪನ ವರ್ಣಿಸಲು


