ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ತಾಲೂಕಿನ ಮುಳವಾಡ ಬಳಿಯ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕವನ್ನು ಸುತ್ತಮುತ್ತಲಿನ 20ಕಿಮಿ ವ್ಯಾಪ್ತಿಯ ಗ್ರಾಮಗಳ ವಾಹನಗಳಿಗೆ ಶುಲ್ಕ ವಿಧಿಸಬಾರದು ಎಂದು ಟೋಲ್ ಪ್ಲಾಜಾ ಎದುರಿಗೆ ಗ್ರಾಮಸ್ಥರು, ಚಾಲಕರು ಹಾಗೂ ರೈತರಿಂದ ಕುಳಿತು ಪ್ರತಿಭಟನೆ ಮಾಡಿದರು.
ಟೋಲ್ ಪ್ಲಾಜಾದಲ್ಲಿ ಕಾನೂನು ಬಾಹೀರವಾಗಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕರರು ಆರೋಪಿಸಿದರು. ಯಾರಿಗೆಲ್ಲಾ ಶುಲ್ಕ ವಿಧಿಸಲಾಗುತ್ತಿದೆ ಎಂಬ ದಾಖಲಾತಿಗಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು. ಟೋಲ್ ವ್ಯಾಪ್ತಿಯ ಗ್ರಾಮಗಳ ಜನರಿಗೆ ಶುಲ್ಕ ವಿಧಿಸಬಾರದು ಎಂದು ಆಗ್ರಹ ಮಾಡಿದರು .
ಸ್ಥಳಕ್ಕೆ ಕೊಲ್ಹಾರ ಠಾಣೆಯ ಪೊಲೀಸರು ಆಗಮಿಸಿ ಪ್ರತಿಭಟನಾಕಾರೊಂದಿಗೆ ಮಾತುಕತೆ ನಡೆಸಿದರು. ಪೊಲೀಸರ ಮನವಿ ಮೇರೆಗೆ ಪ್ರತಿಭಟನೆ ಪ್ರತಿಭಟಕಾರರು ಹಿಂಪಡೆದರು.
ಪ್ರತಿಭಟನೆ ಕಾರಣ ಎನ್ಎಚ್ 50 ರಲ್ಲಿ ಸಂಚಾರಕ್ಕೆ ವ್ಯತ್ಯಯವಾಗಿ ವಾಹನಗಳು ಸಾಲುಗಟ್ಟಿ ನಿಂತು ವಿವಿಧ ವಾಹನಗಳು, ಪ್ರಯಾಣಿಕರಿಗೆ ತೊಂದರೆ ಉಂಟಾಯಿತು.
“ಕೊಲ್ಹಾರ ತಾಲೂಕು ಹಾಗೂ ಜಿಲ್ಲೆಯ ಜನರು ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳಿಗೆ ಫಲವತ್ತಾದ ಭೂಮಿಯನ್ನು ತ್ಯಾಗಮಾಡಿದ್ದಾರೆ. ಆದ್ದರಿಂದ ಕೇಂದ್ರ ಸರಕಾರವು ಸ್ಥಳೀಯ ವಾಹನಗಳಿಗೆ ಟೋಲ್ ಶುಲ್ಕವನ್ನು ವಿಧಿಸಬಾರದು.
ಸ್ಥಳೀಯವಾಗಿ 25 ಕಿಮೀ ಬರುವ ಹಳದಿ ಮತ್ತು ಬಿಳಿ ಬಣ್ಣದ ಬೋರ್ಡ್ ವಾಹನಗಳಿಗೆ ಯಾವುದೇ ಶುಲ್ಕ ನಿಗದಿ ಮಾಡದೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ ಇದು ತಾತ್ಕಾಲಿಕ. ಇದನ್ನು ಲೋಕಸಭಾ ಸದಸ್ಯರು ಆಶ್ವಾಸನೆ ನೀಡಿದ್ದಾರೆ ಆದ್ದರಿಂದ ಪ್ರತಿಭಟನೆ ಕೈ ಬಿಡಲಾಯಿತು”
– ಸೋಮು ಬಿರಾದಾರ
ಅಧ್ಯಕ್ಷರು, ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ

