ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ವಿಜಯಪುರದ ಅಮ್ಮ ಫೌಂಡೇಶನ್ ಕೊಡಮಾಡುವ 2025ನೇ ಸಾಲಿನ ರಾಜ್ಯ ಮಟ್ಟದ “ಬಸವ ಚೇತನ” ಪ್ರಶಸ್ತಿಗೆ ಸಾಹಿತಿ, ಯುವ ಮುಖಂಡ, ನ್ಯಾಯವಾದಿ ಮಹ್ಮದಗೌಸ ಹವಾಲ್ದಾರ ಅವರು ಆಯ್ಕೆಯಾಗಿದ್ದಾರೆ.
ಮಹಮ್ಮದಗೌಸ್ ಹವಾಲ್ದಾರ್ ಅವರ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜುಲೈ 6 ರಂದು ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಹವಾಲ್ದಾರ್ ಅವರಿಗೆ “ಬಸವ ಚೇತನ” ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಯ್ಕೆ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

