ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಸಂಜೀವ ಜೋಶಿ, ವೈದ್ಯರು ಹೇಗೆ ರೋಗಿಗಳ ಶುಶ್ರೂಷೆ ಮಾಡಿ ರೋಗವನ್ನು ಗುಣಪಡಿಸುವರೋ ಅದೇ ರೀತಿ ಸಮಾಜಕ್ಕೆ ಚಿಕಿತ್ಸೆ ನೀಡಿ ಸಾಮಾಜಿಕ ಸ್ವಾಸ್ಥವನ್ನು ಕಾಪಾಡಿದವರು ಬಸವಣ್ಣ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಕನಕದಾಸರು ಪುರಂದರದಾಸರು ಸಾಮಾಜಿಕ ಚಿಕಿತ್ಸಕರನ್ನು ನಾವು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ವೈದ್ಯ ಲೋಕದ ವೈಜ್ಞಾನಿಕ ಚಿಂತನ ಮಂಥನ ನಡೆಸುವ ಈ ಸುದಿನದಂದು ಸಾರ್ವಜನಿಕರಲ್ಲಿ ವೈದ್ಯರ ಪಾತ್ರ ಮತ್ತು ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಹಾಗೂ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಿ ಸoಯಮ , ಪ್ರೀತಿ , ಕರುಣೆ ಮಾನವೀಯತೆ ಮೆರೆಯುವ ಪವಿತ್ರ ಕ್ಷೇತ್ರವೆಂದರೆ ವೈದ್ಯಕೀಯ ಕ್ಷೇತ್ರ, ವೈದ್ಯರಿಗೆ ದೇವರು ನೀಡಿದ ಪವಿತ್ರ ಕರ್ತವ್ಯವೆಂದು ಭಾವಿಸಿ ಸಮಾಜದ ಋಣ ತೀರಿಸಬೇಕಾಗಿದೆ ಎಂದು ತಿಳಿಸಿದರು.
ವೇದಿಕೆಯ ಮೇಲೆ ಪ್ರಧಾನ ಗುರುಮಾತೆ ಶ್ರೀಮತಿ ರೂಪಾ ತೋಳ ಮುಖ್ಯೋಪಾಧ್ಯಾಯ ರಮೇಶ ಕೋಟ್ಯಾಳ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು , ಶಿಕ್ಷಕ ವೃಂದ, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕ ಸತೀಶ ಕುಲಕರ್ಣಿ ನಿರೂಪಿಸಿ, ವಂದಿಸಿದರು.

