ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಮಹಾರಾಷ್ಟçದ ವಿವಿಧ ಜಲಾಶಯಗಳಿಂದ ನೀರನ್ನು ಭೀಮಾ ನದಿಗೆ ಹರಿಬಿಟ್ಟ ಪರಿಣಾಮದಿಂದಾಗಿ ಆಲಮೇಲ ತಾಲೂಕಿನ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್‌ಗೆ ಸಧ್ಯ ೪೭೬೯೦ ಕ್ಯೂಸೇಕ್ ನೀರು ಹರಿದು ಬರುತ್ತಿದೆ ಎಂದು ಕೆಎನ್‌ಎನ್‌ಎಲ್ ಎಇಇ ಸಂತೋಷಕುಮಾರ ಸಜ್ಜನ್ ಮಾಹಿತಿ ನೀಡಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸೊನ್ನ ಬ್ಯಾರೇಜ್‌ನ ಒಟ್ಟು ಸಂಗ್ರಹ ಸಾಮರ್ಥ್ಯ ೩.೧೬೬ ಟಿಎಂಸಿ ಇದ್ದು ಮಹಾರಾಷ್ಟçದ ಜಲಾಶಯಗಳಿಂದ ಒಟ್ಟು ೪೭೬೯೦ ಕ್ಯೂಸೇಕ್ಸ್ ನೀರು ಹರಿದು ಬಂದಿದ್ದರಿಂದ ಬ್ಯಾರೆಜ್‌ನ ೨೪ ಗೇಟ್‌ಗಳ ಮೂಲಕ ೪೦ ಸಾವಿರ ಕ್ಯೂಸೇಕ್ಸ್ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ. ಹೀಗಾಗಿ ಸೊನ್ನ ಬ್ಯಾರೇಜ್ ಕೆಳಗಡೆಯಲ್ಲಿ ನದಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಲಿದೆ.
ಆದ್ದರಿಂದ ತಾಲೂಕಿನ ನದಿ ತೀರದ ದೇವಣಗಾಂವ, ಶಂಬೇವಾಡ, ಕಡ್ಲೇವಾಡ, ಕುಮಸಗಿ , ಚಿಕ್ಕಹವಳಗಿ, ಬಗಲೂರ ಗ್ರಾಮಗಳ ಜನರು ರೈತರು ಜಾಗೃತ ವಾಗಿ ಇರಬೇಕು ಸದ್ಯ ಭೀಮಾ ನದಿಯಲ್ಲಿಗ ಪ್ರವಾಹ ಪರಿಸ್ಥಿತಿ ಇಲ್ಲ. ಆದಾಗ್ಯೂ ಕೂಡ ಸಾರ್ವಜನಿಕರು ನದಿ ಪಾತ್ರಕ್ಕೆ ಹೋಗುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.