ವಿಜಯಪುರದಲ್ಲಿ ಪ್ರೊ.ಸಿದ್ದಣ್ಣ ಲಂಗೋಟಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕದಲ್ಲಿ ಹುಟ್ಟಿಕೊಂಡ ಬಂಡಾಯ ಸಾಹಿತ್ಯಕ್ಕೆ ಮುನ್ನುಡಿ ಬರೆದು ಮುನ್ನಡೆಸಿದವರು. ಕುಮಾರ ಕಕ್ಕಯ್ಯ ಪೋಳರು ಅವರು ಬಿ.ಆರ್. ಅಂಬೇಡ್ಕರರಂತೆ ಶೋಷಣೆಗೆ ಒಳಗಾಗಿ ನೋವು ಮತ್ತು ಅವಮಾನ ಉಂಡು ಯಾತನೆ ಪಟ್ಟರು. ಡೋಹರ ಸಮುದಾಯಕ್ಕೆ ಸೇರಿದ ಅವರು ತಹಶೀಲ್ದಾರರಾಗಿ ಸ್ವಯಂ ನಿವೃತ್ತಿ ಹೊಂದಿ ಸಮಾಜ ಸೇವೆಗೆ ತೊಡಗಿಸಿದರು. ಅವರ ಹೆಸರು ಬಿ.ಎಸ್. ಪೋಳ ಕುಮಾರ ಕಕ್ಕಯ್ಯ ವಚನಾಂಕಿತದಿಂದ ಸಾವಿರಾರು ವಚನಗಳನ್ನು ರಚಿಸಿ ಆಧುನಿಕ ವಚನಕಾರರಾದರು. ದೀನ ದಲಿತರು ಮಹಿಳೆಯರ ನೋವುಗಳಿಗೆ ಧ್ವನಿಯಾಗಿ ಬಂಡಾಯ ಸಾಹಿತ್ಯ ಬರೆದರು. ಎಂದು ಪ್ರೊ. ಸಿದ್ದಣ್ಣ ಲಂಗೋಟಿ ಅವರು ಹೇಳಿದರು.
ಅವರು ಶರಣ ಸಾಹಿತ್ಯ ಪರಿಷತ್ತು, ಎ.ಎಸ್. ಹಿಪ್ಪರಗಿ ಪ್ರತಿಷ್ಠಾನ, ಜಿಲ್ಲಾ ವಿರಶೈವ ಲಿಂಗಯತ ಮಹಾಸಭಾ ಮತ್ತು ಕುಮಾರ ಕಕ್ಕಯ್ಯ ಪೋಳ ಪ್ರತಿಷ್ಠಾನಗಳ ಸಂಯುಕ್ತಾಶಯದಲ್ಲಿ ಡನೆದ ಕುಮಾರ ಕಕ್ಕಯ್ಯ ಪೋಳ ಲಿಂ. ಸಿದ್ದಣ್ಣ ಕೋಳೂರು ಮಲಕಾಜಪ್ಪ ವಡವಡಗಿ ಅವರ ದತ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣ ಸಾಹಿತ್ಯಕ್ಕೆ ಕುಮಾರ ಕಕ್ಕಯ್ಯ ಪೋಳರು ಅಪಾರ ಕೊಡುಗೆ ನೀಡಿದ್ದಾರೆಂದು ಹೇಳಿದರು.
ಡಾ. ಕಲ್ಯಾಣಮ್ಮ ಲಂಗೋಟಿ ಅವರು ಕುಮಾರ ಕಕ್ಕಯ್ಯನವರ ಜೀವನದರ್ಶನ ಕುರಿತು ಮಾತನಾಡಿದರು. ಮಡಿವಾಳ ಮಾಚಯ್ಯ ಹಾಗೂ ಅಂಬಿಗರ ಚೌಡಯ್ಯನವರಂತೆ ಕುಮಾರ ಕಕ್ಕಯ್ಯನವರು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ದುರ್ವಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅವರ ವಚನಗಳಲ್ಲಿ ನೋವು, ವ್ಯಂಗ್ಯ ವಿಡಂಬನೆಗಳು ಹಾಸು ಹೊಕ್ಕಾಗಿವೆ. ಎಂದು ಹೇಳಿದರು.
ಸಮಾರಂಭದಲ್ಲಿ ಕಲ್ಯಾಣಮ್ಮನವರು ರಚಿಸಿದ ಲಿಂಗಾಯತ ಧರ್ಮ ಸ್ತ್ರೀ ಸಮಾನತೆ ಎಂಬ ಗ್ರಂಥ ಲೋಕಾರ್ಪಣೆಗೊಂಡಿತು.
ಅಧ್ಯಕ್ಷತೆ ವಹಿಸಿದ್ದ ವಿ.ಸಿ. ನಾಗಠಾಣರು ಮಾತನಾಡಿ, ನೊಂದವರ ನೋವುಗಳ ಅನುಭವ ನೋವುಂಡವರಿಗೇನೆ ಗೊತ್ತಿರುತ್ತದೆ. ಹೀಗಾಗಿ ದಲಿತ ಸಮುದಾಯದ ಮುಖವಾಣಿಯಾಗಿ ಕುಮಾರ ಕಕ್ಕಯ್ಯನವರು ತಮ್ಮ ಅಂತರಾಳ ನೋವುಗಳನ್ನು ಸಾಹಿತ್ಯದ ಮೂಲಕ ಪ್ರಕಟಿಸಿದ್ದಾರೆಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಜಂಬುನಾಥ ಕಂಚ್ಯಾಣಿ ಅತಿಥಿ ಮಾನ್ಯರನ್ನು ಸ್ವಾಗತಿಸಿ ಪರಿಚಯಿಸಿದರು. ಹಿಪ್ಪರಗಿ ಪ್ರತಿಷ್ಠಾನದ ಅಧ್ಯಕ್ಷ ಡಾ. ವಿ.ಡಿ. ಐಹೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ದತ್ತಿ ದಾಸೋಹಿಗಳ ಪರಿಚಯ ಮಾಡಿದರು. ಡಾ. ಎಸ್.ಎಂ. ಮೇತ್ರಿ ವಂದಿಸಿದರು.
ಆಯ್.ಡಿ. ತೊಂಡಿಕಟ್ಟಿ, ಬಿ.ಸಿ. ಸಾರವಾಡ, ಶ್ರೀಕಾಂತ ಪೋಳ, ಚಿದಾನಂದ ಪೋಳ, ಡಾ. ಉಷಾ ಹಿರೇಮಠ ಎಸ್.ವಾಯ್. ಗದಗ, ಬಿ.ಟಿ. ಈಶ್ವರಗೊಂಡ, ಎಸ್.ಎನ್. ಶಿವಣಗಿ, ಸಂಜಯ ಇಂಗಳೆ, ಗೌತಮ ಪೋಳ, ಎಸ್.ಬಿ. ದೊಡಮನಿ, ಸಾವಿತ್ರಿ ಪೋಳ, ಎಸ್.ಜಿ. ನಾಡಗೌಡರ, ಜೆ.ಎಸ್. ಪಾಟೀಲ, ಪ್ರಭುಗೌಡ ಪಾಟೀಲ, ಅನಿಲ ಹೊಸಮನಿ, ಪೋಳ ಸಮುದಾಯದ ಬಂಧು ಬಳಗ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.