ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಜಯಪುರ ಲಿಂಗರಾಜ ವಿವಿಧೋದ್ದೇಶ ಸಂಸ್ಥೆ, ಶ್ರೀಮತಿ ಕಮಲಾಬಾಯಿ ಬಸನಗೌಡ ಪಾಟೀಲ ಚಾರಿಟೇಬಲ್ ಟ್ರಸ್ಟ್, ಶಿರಸಂಗಿ ಲಿಂಗರಾಜ ಸಹಕಾರಿ ಪತ್ತಿನ ಸಂಘ ಹಾಗೂ ವಿಜಯಪುರ ಜಿಲ್ಲಾ ಲಿಂಗಾಯತ ಕುಡವಕ್ಕಲಿಗ ನೌಕರರ ಕ್ಷೇಮಭಿವೃದ್ಧಿ ವೇದಿಕೆ ಇವರ ಸಹಯೋಗದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್. ಎಲ್.ಸಿ ಹಾಗೂ ಪಿ.ಯು.ಸಿ ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿಜಯಪುರ, ಬಾಗಲಕೋಟೆ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶೇ.85 ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಜುಲೈ 10 ರ ಒಳಗಾಗಿ ವಿಜಯಪುರ ನಗರದ ಅಥಣಿ ರಸ್ತೆಯ ಜಿ ಕೆ ಪಾಟೀಲ ಸಭಾಭವನ ಹಾಗೂ ಆಶ್ರಮ ರಸ್ತೆಯ ಸಾಯಿ ಗಿಫ್ಟ್ ಸೆಂಟರ್ ನಲ್ಲಿ ಅರ್ಜಿ ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ: 7892071467 ಹಾಗೂ 8147065366 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.