ಉದಯರಶ್ಮಿ ದಿನಪತ್ರಿಕೆ
ಇಂಡಿ: ಸರಕಾರಿ ಆದರ್ಶ ವಿದ್ಯಾಲಯ ಇಂಡಿಯಲ್ಲಿ 2025-26 ನೇ ಸಾಲಿನಲ್ಲಿ 7, 8 ಮತ್ತು 9ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಮಾನ್ಯ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ರವರ ಸುತ್ತೋಲೆಯ ಮೇರೆಗೆ ತರಗತಿವಾರು ಮತ್ತು ರೋಸ್ಟರ್ ಆಧಾರದ ಮೇಲೆ ಸಂಸ್ಥೆಯಲ್ಲಿ ಖಾಲಿ ಇರುವ 7ನೇ ತರಗತಿಯಲ್ಲಿ 17 ಸೀಟುಗಳು, 8ನೇ ತರಗತಿಯಲ್ಲಿ 12 ಸೀಟುಗಳು, 9ನೇ ತರಗತಿಯಲ್ಲಿ 10 ಸೀಟುಗಳು ಖಾಲಿ ಇದ್ದು, ಆಸಕ್ತಿಯುಳ್ಳ ವಿದ್ಯಾರ್ಥಿಗಳು ದಿನಾಂಕ: 03-07-2025 ರಿಂದ 10-07-2025 ರವರೆಗೆ ಸರಕಾರಿ ಆದರ್ಶ ವಿದ್ಯಾಲಯ ಇಂಡಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ, ಮರಳಿ ಶಾಲೆಗೆ ಸಲ್ಲಿಸುವದು.
ಪರೀಕ್ಷಾ ದಿನಾಂಕ : 25-07-2025 ರಂದು ಸರಕಾರಿ ಆದರ್ಶ ವಿದ್ಯಾಲಯ ಇಂಡಿಯಲ್ಲಿ ಜರುಗುವದು ಎಂದು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ ಮತ್ತು ಮುಖ್ಯೋಪಾಧ್ಯಾಯ ಎಸ್.ಜಿ.ಬನಸೋಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.