ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಾಲೆಗಳು ಸಾಮಾನ್ಯವಾಗಿ ಬಣ್ಣಗಳ ದಿನವನ್ನು ಕಿರಿಯ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶ್ರೇಣಿಗಳ ವಿದ್ಯಾರ್ಥಿಗಳಿಗೆ ಒಂದು ಮನರಂಜನೆ ಮತ್ತು ಶೈಕ್ಷಣಿಕ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ ಎಂದು ಕ್ರಿತಯೇಟಿವ್ ಕಿಡ್ಸ್ ಹೋಮ್‌ನ ಮುಖ್ಯಗುರುಮಾತೆ ಡಾ.ಜ್ಯೋತಿ ಪೂಜಾರ ಹೇಳಿದರು.
ಸಿಂದಗಿ ಪಟ್ಟಣದ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ಬಣ್ಣಗಳ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲ್ಯದ ಶಿಕ್ಷಣದಲ್ಲಿ ಬಣ್ಣಗಳ ದಿನವನ್ನು ಆಚರಿಸುವುದರಿಂದ ಮಕ್ಕಳಿಗೆ ಹಲವಾರು ಬೆಳವಣಿಗೆಯ ಪ್ರಯೋಜನಗಳಿವೆ. ಇದು ಬಣ್ಣ ಗುರುತಿಸುವಿಕೆ, ಅರಿವಿನ ಕೌಶಲ್ಯಗಳು, ಸೃಜನಶೀಲತೆ ಮತ್ತು ಸಂವೇದನಾ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಜೊತೆಗೆ ಸಾಮಾಜಿಕ ಸಂವಹನ ಮತ್ತು ಭಾಷಾ ಕೌಶಲ್ಯಗಳನ್ನು ಬೆಳೆಸುತ್ತದೆ. ಬಣ್ಣಗಳ ದಿನದೊಂದಿಗೆ ಸಂಬಂಧಿಸಿದ ಮೋಜಿನ ಮತ್ತು ಆಕರ್ಷಕ ಚಟುವಟಿಕೆಗಳು ಚಿಕ್ಕ ಮಕ್ಕಳಿಗೆ ಕಲಿಕೆಯನ್ನು ಆನಂದದಾಯಕ ಮತ್ತು ಸ್ಮರಣೀಯವಾಗಿಸುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು, ಅದೇ ಬಣ್ಣದ ಮಾದರಿಗಳನ್ನು ತಂದು ಅದರ ಬಗ್ಗೆ ವಿವರಿಸಿ ಸಂಭ್ರಮಿಸಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ರಮೇಶ ಪೂಜಾರ, ಶಿಕ್ಷಕಿಯರಾದ ಅಶ್ವಿನಿ ಲೋಣಿ, ಮಂಗಲಾ ಬಮ್ಮಣ್ಣಿ, ಸಾದನಾ ಇಮಡೆ, ದಾನಮ್ಮ ಕೋರಿ, ಪ್ರೀಯಾ ಪವಾಡೆ, ರೇವತಿ ಬಳೂಂಡಗಿ, ಸುಸ್ಮಿತಾ ಕೋರಿ, ಅಕ್ಷತಾ ಹುಮನಾಬಾದ, ಸಿಬ್ಬಂದಿಗಳಾದ ಆನಂದಯ್ಯಸ್ವಾಮಿ ಹಿರೇಮಠ, ಅಂಬಿಕಾ ಕರಿಶೆಟ್ಟಿ, ಹೇಮಾ ಬಡಿಗೇರ ರೆಹಮತಬಿ ಇದ್ದರು.