ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಎಕ್ಸೆಲ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆ ಬಸ್ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ ಸಮೀಪದ ತಗ್ಗು ಪ್ರದೇಶದಲ್ಲಿ ಮಂಗಳವಾರ ಉರುಳಿ ಬಿದ್ದಿದೆ.
ಜಮಖಂಡಿಯಿಂದ ಹಿಪ್ಪರಗಿ ಮಾರ್ಗವಾಗಿ ಅಥಣಿಗೆ ಹೋಗುತ್ತಿದ್ದ ಬಸ್ ಬೆಳಗ್ಗೆ 11.30ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಸ್ಥಳೀಯರುಬಸ್ ಕಿಟಕಿ ಹಾಗೂ ಹಿಂಬದಿ ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಚಾಲಕ, ನಿರ್ವಾಹಕ ಹಾಗೂ ಏಳೆಂಟು ಜನ ಪ್ರಯಾಣಿಕರು ಮಾತ್ರ ಬಸ್ ನಲ್ಲಿದ್ದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಜಮಖಂಡಿ ಘಟಕ ವ್ಯವಸ್ಥಾಪಕ ಡಿˌ ಬಿˌ ಗಸ್ತಿ “ಉದಯರಶ್ಮಿ” ಪತ್ರಿಕೆಗೆ ತಿಳಿಸಿದ್ದಾರೆ.
ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಶಾಂತಾ ಹಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

