ಉದಯರಶ್ಮಿ ದಿನಪತ್ರಿಕೆ
ಬಸವನ ಬಾಗೇವಾಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅ.4 ರಂದು ಬಸವ ಭವನದಲ್ಲಿ ಜರುಗಿದ ಬಸವನ ಬಾಗೇವಾಡಿ ತಾಲೂಕ ಮಟ್ಟದ “ಯುವ ಸಂಸತ್ತು” ಕಾರ್ಯಕ್ರಮದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ತೋರಿದ 34 ವಿದ್ಯಾರ್ಥಿಗಳು ಅ.8 ರಂದು ಅಂತಿಮ ಹಂತದ “ಯುಥ್ ಪಾರ್ಲಿಮೆಂಟ್” ಕಾರ್ಯಕ್ರಮಕ್ಕೆ ಆಯ್ಕೆಗೊಂಡಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೆಚ್.ಎಂ. ನಾಟೀಕಾರ, ಪ್ರೊ. ಇಸ್ಮಾಯಿಲ್ ಶಪಿಯುಲ್ಲಾ & ಪ್ರೊ. ನಂದಪ್ಪ ಬಿರಾದಾರ ಇವರು ಮಾರ್ಗದರ್ಶನ ಮಾಡಿದ್ದರು.
ಯುವ ಸಂಸತ್ತು ಕಾರ್ಯಕ್ರಮಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ನೀಲಪ್ಪ ಹೊಸಮನಿ ಹಾಗೂ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

