Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಮೀಣ ಕ್ರೀಢೆಗಳನ್ನು ಉಳಿಸಿ ಬೆಳೆಸಬೇಕಿದೆ :ಶಾಸಕ ಸವದಿ

ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ

ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ;ಸುರೇಶ ಶೇಡಶ್ಯಾಳ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ
(ರಾಜ್ಯ ) ಜಿಲ್ಲೆ

ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ತಾಳಿಕೋಟೆ: ಬಸ್ ಘಟಕದಿಂದ ಮಿಣಜಗಿ ಗ್ರಾಮದ ಮಾರ್ಗವಾಗಿ ಮುದ್ದೇಬಿಹಾಳಕ್ಕೆ ಸಂಚರಿಸುತ್ತಿದ್ದ ಸಾರಿಗೆ ಬಸ್‌ಗಳು ಮತ್ತು ಮುದ್ದೇಬಿಹಾಳದಿಂದ ತಾಳಿಕೋಟೆಗೆ ಆಗಮಿಸುವ ಬಸ್ಸುಗಳು ಇದೀಗ ಮಿಣಜಗಿ ಮಾರ್ಗವನ್ನು ಬದಲಿಸಿ ಹಡಗಿನಾಳ ಮಾರ್ಗವಾಗಿ ಸಂಚರಿಸುತ್ತಿರುವುದರಿಂದ ಗ್ರಾಮಸ್ಥರಿಗೆ ತೀವ್ರ ಅನಾನುಕೂಲ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ಮಿಣಜಗಿ ಮಾರ್ಗದೆಡೆಗೆ ಬಸ್ ಸಂಚಾರ ಪುನಃ ಮುಂದುವರಿಸುವಂತೆ ಆಗ್ರಹಿಸಿ ಮಿಣಜಗಿ ಗ್ರಾಮಸ್ಥರು ಸೋಮವಾರರಂದು ಬಸ್ ಘಟಕ ವ್ಯವಸ್ಥಾಪಕ ಪಿ.ಕೆ. ಜಾಧವ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಮುಖಂಡ ವೀರೇಶ ಬಾಗೇವಾಡಿ ಮಾತನಾಡಿ, ಮಿಣಜಗಿ ಗ್ರಾಮವು ಪ್ರಮುಖ ಉದ್ಯೋಗ ಕೇಂದ್ರವಾಗಿದ್ದು, ಪ್ರತಿದಿನ ನೂರಾರು ಕೂಲಿ ಕಾರ್ಮಿಕರು ವಿವಿಧ ಗ್ರಾಮಗಳಿಂದ ಇಲ್ಲಿಗೆ ಕೆಲಸಕ್ಕಾಗಿ ಆಗಮಿಸುತ್ತಾರೆ. ಬಸ್‌ಗಳ ಮಾರ್ಗ ಬದಲಾವಣೆಯಿಂದ ಕಾರ್ಮಿಕರು ಮಾತ್ರವಲ್ಲದೆ ಮಿಣಜಗಿಯಿಂದ ತಾಳಿಕೋಟೆ ಪಟ್ಟಣಕ್ಕೆ ತೆರಳುವ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಹಾಗೂ ಉದ್ಯೋಗಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದರು.
ಈ ಕುರಿತು ಈಗಾಗಲೇ ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಅಲ್ಲದೆ, ವಿಜಯಪುರದಿಂದ ತಾಳಿಕೋಟೆಗೆ ಸಂಚರಿಸುವ ಬಸ್‌ಗಳು ಮಿಣಜಗಿ ಕ್ರಾಸ್‌ನಲ್ಲಿ ನಿಲುಗಡೆ ನೀಡದಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಂದ ಮಿಣಜಗಿಗೆ ಕೆಲಸಕ್ಕಾಗಿ ಬರುವ ಕೂಲಿ ಕಾರ್ಮಿಕರಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಮಿಣಜಗಿ ಮಾರ್ಗದಲ್ಲಿ ಬಸ್ ಸಂಚಾರ ಪುನರಾರಂಭಿಸುವುದು ಹಾಗೂ ಮಿಣಜಗಿ ಕ್ರಾಸ್‌ನಲ್ಲಿ ಬಸ್‌ಗಳಿಗೆ ನಿಲುಗಡೆ ಕಲ್ಪಿಸುವುದು ಸೇರಿದಂತೆ ಎರಡೂ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಘಟಕ ವ್ಯವಸ್ಥಾಪಕ ಪಿ.ಕೆ. ಜಾಧವ ಅವರು, ಮಿಣಜಗಿ ಗ್ರಾಮಸ್ಥರು ಬಸ್ ನಿಲುಗಡೆ ಹಾಗೂ ಮಾರ್ಗದ ಸಮಸ್ಯೆ ಕುರಿತು ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಸಂಚಾರ ನಿಯಂತ್ರಕರಿಗೆ ಸೂಚನೆ ನೀಡಿದ್ದು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಸಂಗನಗೌಡ ಪಾಟೀಲ, ಐ.ವಾಯ್. ಹಿರೇಮಠ, ಎ.ಎಸ್. ಬಿರಾದಾರ, ಎಂ.ಜೆ. ಪಾಟೀಲ, ಕೆ.ಎ. ಪಾಟೀಲ, ಸಿ.ಎಂ. ಸಜ್ಜನ, ಐ.ಎಂ. ಯಾಳವಾರ, ಶರಣಗೌಡ ಬಿರಾದಾರ, ಈರಣ್ಣ ಮದರಿ, ಸೋಮು ನಾಯ್ಕೋಡಿ, ಎಂ.ಆರ್. ಅಕ್ಕಿ, ಬಿ.ಹೆಚ್. ಬಶೆಟ್ಟಿ, ಕೆ.ಎಂ. ಹಗರಟಗಿ, ರಾಮು ಜಂಬಗಿ, ಮಹಾಂತೇಶ ಮಂಗ್ಯಾಳ, ಶಿವು ಮಡಿಕೇಶ್ವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಮೀಣ ಕ್ರೀಢೆಗಳನ್ನು ಉಳಿಸಿ ಬೆಳೆಸಬೇಕಿದೆ :ಶಾಸಕ ಸವದಿ

ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ;ಸುರೇಶ ಶೇಡಶ್ಯಾಳ

ಶಾಸಕರ ಭರವಸೆ: ರೈತರ ಅಮರಣ ಉಪವಾಸ ಅಂತ್ಯ

ಅ.೭ರಂದು ವಿಜಯಪುರಕ್ಕೆ ಎನ್‌ಪಿಎಸ್ ಸಂಚಯ ಯಾತ್ರೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಮೀಣ ಕ್ರೀಢೆಗಳನ್ನು ಉಳಿಸಿ ಬೆಳೆಸಬೇಕಿದೆ :ಶಾಸಕ ಸವದಿ
    In (ರಾಜ್ಯ ) ಜಿಲ್ಲೆ
  • ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ;ಸುರೇಶ ಶೇಡಶ್ಯಾಳ
    In (ರಾಜ್ಯ ) ಜಿಲ್ಲೆ
  • ಶಾಸಕರ ಭರವಸೆ: ರೈತರ ಅಮರಣ ಉಪವಾಸ ಅಂತ್ಯ
    In (ರಾಜ್ಯ ) ಜಿಲ್ಲೆ
  • ಅ.೭ರಂದು ವಿಜಯಪುರಕ್ಕೆ ಎನ್‌ಪಿಎಸ್ ಸಂಚಯ ಯಾತ್ರೆ
    In (ರಾಜ್ಯ ) ಜಿಲ್ಲೆ
  • ಪೂರ್ವಭಾವಿ ಸಭೆ: ಕನ್ನಡಹಬ್ಬ ಅದ್ದೂರಿ ಆಚರಣೆಗೆ ನಿರ್ಧಾರ
    In (ರಾಜ್ಯ ) ಜಿಲ್ಲೆ
  • ಕಾಲುವೆಗಳಿಗೆ ನಿರಂತರ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ೩೭೧ಜೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ
    In (ರಾಜ್ಯ ) ಜಿಲ್ಲೆ
  • ಬಯಲಾಟವನ್ನು ನಾಡಕಲೆಯಾಗಿ ಘೋಷಿಸಿ :ಮೇತ್ರಿ
    In (ರಾಜ್ಯ ) ಜಿಲ್ಲೆ
  • ದೆಹಲಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆಗೆ ಕೆಯುಡಬ್ಲ್ಯೂಜೆ ಖಂಡನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.