ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು, ವ್ಯಾಯಾಮ ಕೇಂದ್ರಗಳು ನಶಿಸಿ ಹೋಗುತಿದ್ದು ಸ್ಪರ್ದೆ, ಕ್ರೀಢಾಕೂಟ, ಪಂದ್ಯಗಳನ್ನು ಆಯೋಜಿಸುವ ಮೂಲಕ ಅವುಗಳನ್ನು ಪೋಷಿಸಬೇಕಾಗಿದೆಯಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಗ್ರಾಮದಲ್ಲಿ ಶ್ರೀ ಎಲ್ಲಮ್ಮದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಸೇವಾ ಸಮೀತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಮುಕ್ತ ತೆರಬಂಡಿ ಸ್ಪರ್ದೆಯ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ಪೋಷಕಾಂಶಗಳುಳ್ಳ ಆಹಾರವನ್ನು ತಿನ್ನಿಸಿ ಸಧ್ರಢರನ್ನಾಗಿ ಬೆಳೆಸುತಿದ್ದರು ಇಂದಿನ ಪೀಳಿಗೆ ಬರೀ ಹೈಬ್ರಿಡ್ ಆಹಾರ ತಿನ್ನುವ ಮೂಲಕ ಅನಾರೋಗ್ಯ ಪೀಡಿತರಾಗುತಿದ್ದು ಇಂತಹ ಸ್ಪರ್ದೆಗಳನ್ನು ಆಯೋಜಿಸಿದಲ್ಲಿ ಅದರಲ್ಲಿ ಭಾಗವಹಿಸುವ ಇಚ್ಛೆಯಿಂದ ಯುವ ಪೀಳಿಗೆ ಮಾತ್ರವಲ್ಲ ನಮ್ಮ ಜಾನುವಾರುಗಳನ್ನು ಕೂಡ ಸಧ್ರಢವಾಗಿ ಬೆಳೆಸಬಹುದು ಎಂದರು. ಕಾರ್ಯಕ್ರಮದ ಸಾನಿಧ್ಯವಹಿಸಿದ ಶ್ರೀ ಪ್ರಭು ಮಹಾಸ್ವಾಮಿಗಳು ಮಾತನಾಡಿ, ಹಳ್ಳಿಗಳಿಗೆ ಮಾತ್ರ ಸಿಮಿತವಾಗಿರುವ ಪಾರಂಪರಿಕ ದೇಶಿ ಕ್ರೀಢೆಗಳ ಆಸಕ್ತಿಯನ್ನು ನಗರ ಪಟ್ಟಣಗಳ ಯುವ ಪೀಳಿಗೆಯಲ್ಲಿ ಬೆಳೆಸಬೇಕಾಗಿದೆ ಎಂದರು ಕಾರ್ಯಕ್ರಮದ ಸಾನಿಧ್ಯವನ್ನು ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾಧನ ಮಹಾರಾಜರು ವಹಿಸಿದ್ದರು, ಅಧ್ಯಕ್ಷತೆಯನ್ನು ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳವಹಿಸಿದ್ದರು, ಯುವ ಮುಖಂಡ ಅವ್ವನಪ್ಪ ಮುಗಳಖೋಡ, ನಾಗಪ್ಪ ಆಲಕನೂರ, ಘಟಿಗೆಪ್ಪ ಜಾಂಗನೂರ, ಮಾರೂತಿ ಮಮದಾಪೂರ, ಲಾಳೆಸಾಬ ಶಿರಹಟ್ಟಿ ಸೇರಿದಂತೆ ಹಲವಾರು ಜನ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಜೇತ ತಂಡಗಳು; ಪ್ರಥಮ ಬಹುಮಾನ ೪೦ ಸಾವಿರ ರೂ. ಗಳನ್ನು ಹೊಂದಿರುವ ಈ ತೆರಬಂಡಿ ಸ್ಪರ್ದೆಯಲ್ಲಿ ಒಟ್ಟು ೧೧ ಬಹುಮಾನಗಳನ್ನು ಆಯೋಜಿಸಲಾಗಿತ್ತು ಅದರಲ್ಲಿ ಪ್ರಥಮ ಬಹುಮಾನ ಕಮಲದಿನ್ನಿಯ ಮಾರುತೇಶ್ವರ ಪಡೆದುಕೊಂಡರು, ೨ನೇಯ ಬಹುಮಾನ ಬಬಲಾದಿಯ ಸಿದ್ದರಾಮೇಶ್ವರ ೩ನೇಯ ಬಹುಮಾನ, ಢವಳೇಶ್ವರದ ದೇವರಸಿ ಉಳ್ಳಾಗಡ್ಡಿ ಸೇರಿದಂತೆ ಒಟ್ಟು ಹನ್ನೊಂದು ತಂಡಗಳಿಗೆ ಬಹುಮಾನ ನೀಡಲಾಯಿತು.

