Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಧರ್ಮಕ್ಷೇತ್ರ ಕುರುಕ್ಷೇತ್ರ ಆಗಬಾರದು!

ನೆಲಮೂಲ ಸಾಹಿತ್ಯ ರಾಜ್ಯ ಯುವ ಗೋಷ್ಠಿ ಸಂಪನ್ನ

ಥ್ರೋಬಾಲ್ ಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸ್ಮರಣೆಯ ಬೆಳಕಿನಲ್ಲಿ ಶರಣ ಸಂಸ್ಕೃತಿಯ ದೀಪ :ಡಾ.ಆಲೂರ
(ರಾಜ್ಯ ) ಜಿಲ್ಲೆ

ಸ್ಮರಣೆಯ ಬೆಳಕಿನಲ್ಲಿ ಶರಣ ಸಂಸ್ಕೃತಿಯ ದೀಪ :ಡಾ.ಆಲೂರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಗದಗದಲ್ಲಿ ನಡೆದ ಲಿಂ.ರುದ್ರಪ್ಪನವರು ಮತ್ತು ಸರೋಜಮ್ಮ ಪಟ್ಟಣ ದಂಪತಿಗಳ ಸ್ಮರಣೋತ್ಸವ ಕಾರ್ಯಕ್ರಮ

ಉದಯರಶ್ಮಿ ದಿನಪತ್ರಿಕೆ

ಗದಗ: ಲಿಂ.ಶರಣೆ ಸರೋಜಮ್ಮ ಹಾಗೂ ಲಿಂ.ರುದ್ರಪ್ಪ ಶಂಕರಪ್ಪ ಪಟ್ಟಣ ಇವರು ಕೇವಲ ಒಂದು ಕುಟುಂಬದ ಹಿರಿಯರಲ್ಲ; ಸಂಸ್ಕಾರ, ಶರಣ ಸಂಸ್ಕೃತಿ, ಸಮಾಜಮುಖಿ ಚಿಂತನೆ, ಸ್ವಾತಂತ್ರ್ಯ ಹೋರಾಟದ ಆದರ್ಶ ಹಾಗೂ ಬಸವಾದಿ ಶಿವಶರಣರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಡೆದ ಆದರ್ಶ ಜೀವಿಗಳು. ಅವರ ಜೀವನಮೌಲ್ಯಗಳು ಮತ್ತು ಸಮಾಜಸೇವೆಯ ಹೆಜ್ಜೆಗುರುತುಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ
ಡಾ.ಅಶೋಕ ಆಲೂರು ಹೇಳಿದರು.
ಅ.04 ರಂದು ನಗರದ ಹುಡ್ಕೋ ಬಡಾವಣೆಯ ಶ್ರೀ ಸಚ್ಚಿದಾನಂದ ಕಲ್ಯಾಣ ಮಂಟಪದಲ್ಲಿ, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ರಾಮದುರ್ಗ ಹಾಗೂ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ವೇದಿಕೆಯ ಆಶ್ರಯದಲ್ಲಿ ನಡೆದ ಲಿಂ.ಪಟ್ಟಣ ದಂಪತಿಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೊಂದು ಸಾಮಾನ್ಯ ಸ್ಮರಣೋತ್ಸವ ಕಾರ್ಯಕ್ರಮವಾಗಿರದೆ, ಹಿರಿಯರ ಬದುಕಿನ ಆದರ್ಶಗಳನ್ನು ವರ್ತಮಾನದ ಬದುಕಿನೊಂದಿಗೆ ಜೋಡಿಸಿದ ಅಪೂರ್ವ ಶರಣ ಸಂಗಮವಾಗಿದೆ ಎಂದು ಡಾ.ಆಲೂರ ಬಣ್ಣಿಸಿದರು.
ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರು ಹಾಗೂ ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರು ಉದ್ಘಾಟನಾ ನುಡಿಗಳಲ್ಲಿ, ತಮ್ಮ ಕುಟುಂಬದ ಪರಂಪರೆ, ಮಮತೆ, ಕರ್ತವ್ಯನಿಷ್ಠೆ, ಸಮಾಜಮುಖಿ ಚಿಂತನೆ ಹಾಗೂ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ಭಾವುಕರಾಗಿ ಮೆಲುಕು ಹಾಕಿದರು.
ಬಸವಾದಿ ಶರಣರ ಅಮೂಲ್ಯ ವಚನ ಸಾಹಿತ್ಯದ ದಿವ್ಯ ಸಾನ್ನಿಧ್ಯದಲ್ಲಿ, ಶಾಂತಲಿಂಗ ಸ್ವಾಮಿಗಳು, ದೊರೆಸ್ವಾಮಿ ಮಠ, ಬೈರನಟ್ಟಿ ಹಾಗೂ ತೋಂಟದಾರ್ಯಮಠ, ಶಿರೋಳ ಇವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮವು ಆಧ್ಯಾತ್ಮಿಕತೆ, ಚಿಂತನೆ, ಕೃತಜ್ಞತೆ ಹಾಗೂ ಮಾನವೀಯ ಮೌಲ್ಯಗಳ ಸುಂದರ ಸಂಗಮವಾಗಿತ್ತು.
ಮಗಳು ಆಶಾತಾಯಿ ಅವರು ತಮ್ಮ ಹಿರಿಯರ ವ್ಯಕ್ತಿತ್ವವನ್ನು ಪರಿಚಯಿಸಿದರು.
ಪ್ರೊ. ರವೀಂದ್ರ ಪಟ್ಟಣ ಸ್ವಾಗತಿಸಿದರು.
ಡಾ.ಶಶಿಕಾಂತ ಪಟ್ಟಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಧನ್ಯತಾಭಾವ ವ್ಯಕ್ತಪಡಿಸಿದರು.
ಕಪ್ಪತಗುಡ್ಡದ ನಂದೀಶ್ವರ ಸ್ವಾಮಿಗಳು ಮಾತನಾಡಿದರು.
ಶರಣ ಶಂಕರ ಕುಪ್ಪಸ್ತ ನಿರೂಪಿಸಿದರು.
ಡಾ. ಎಸ್.ಸಿ. ಚವಡಿ, ಮಹಾದೇವಪ್ಪ ಬಟ್ಟೂರ, ಪ್ರೊ. ಶಾರದಮ್ಮ ಪಾಟೀಲ, ಶರಣೆ ಆಶಾಲತಾ ಸೊಗಲದ, ಡಾ. ಶಿಲ್ಪಾ ಪವಾಡಶೆಟ್ಟರ ಹಾಗೂ ಶಾಸನತಜ್ಞೆ, ಹಿರಿಯ ಸಂಶೋಧಕಿ ಪ್ರೊ. ಹನುಮಾಕ್ಷಿ ಗೋಗಿ ವೇದಿಕೆ ಮೇಲಿದ್ದರು.
ಲಿಂಗೈಕ್ಯರಾದ ರುದ್ರಪ್ಪನವರು ಮತ್ತು ಸರೋಜಮ್ಮ ಪಟ್ಟಣ ದಂಪತಿಗಳ ಸ್ಮರಣೋತ್ಸವವನ್ನು ಅವರ ಮಕ್ಕಳಾದ ಡಾ. ಶಶಿಕಾಂತ ಪಟ್ಟಣ ಮತ್ತು ಪ್ರೊ. ರವೀಂದ್ರ ಪಟ್ಟಣ ಅವರು ಆಚರಿಸಿದ ರೀತಿ ನಿಜಕ್ಕೂ ಮಾದರಿಯಾಯಿತು.

ಬಾಕ್ಸ್ ೧

ಡಾ. ಫ.ಗು. ಹಳಕಟ್ಟಿಯವರಿಗೆ ಗೌರವ ನಮನ

ಇದೇ ಸಂದರ್ಭದಲ್ಲಿ ವಚನ ಸಾಹಿತ್ಯದ ಮಹಾನ್ ಸೇವಕರಾದ ಡಾ. ಫ.ಗು. ಹಳಕಟ್ಟಿ ಅವರ ಮೊಮ್ಮಗಳಾದ ಶರಣೆ ಸುಜಾತಾ ಹಳಕಟ್ಟಿ ಅವರನ್ನು ಸತ್ಕರಿಸುವ ಮೂಲಕ ಹಳಕಟ್ಟಿ ಕುಟುಂಬಕ್ಕೆ ಗೌರವ ಸಮರ್ಪಿಸಲಾಯಿತು.

ಬಸವ ಸಂಕಲ್ಪದ ಸಾಕ್ಷಿಯಾದ ಗದಗ ಜಿಲ್ಲಾ ಘಟಕದ ಉದ್ಘಾಟನೆ

ಸ್ಮರಣೋತ್ಸವದ ಸಂದರ್ಭದಲ್ಲಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆಯ ಗದಗ ಜಿಲ್ಲಾ ಘಟಕದ ಉದ್ಘಾಟನೆಯೂ ನೆರವೇರಿತು.
ಡಾ. ಅಶೋಕ ಆಲೂರ ಅವರು ನೂತನ ಜಿಲ್ಲಾ ಘಟಕದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

’ಬಸವ ಗುರು’ ಪ್ರಶಸ್ತಿ ಪ್ರದಾನ

ಇದೇ ಸಂದರ್ಭದಲ್ಲಿ ಡಾ. ಅಶೋಕ ಆಲೂರು, ಡಾ. ವೀಣಾ ಯಲಿಗಾರ, ಡಾ. ದಾನಮ್ಮ ಝಳಕಿ, ಅಪ್ಪಾಸಾಹೇಬ ತುಪ್ಪದ, ಡಾ. ಶಾರದಾಮಣಿ ಹುನಶಾಳ, ಜಿ.ಎಂ. ಹಡಗಿನಾಳ ಹಾಗೂ ಶರಣೆ ಅನ್ನಪೂರ್ಣ ಎಸ್. ಕೊಟಗಿ ಅವರಿಗೆ “ಬಸವ ಗುರು” ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ. ವೀಣಾ ಯಲಿಗಾರ ಮಾತನಾಡಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಧರ್ಮಕ್ಷೇತ್ರ ಕುರುಕ್ಷೇತ್ರ ಆಗಬಾರದು!

ನೆಲಮೂಲ ಸಾಹಿತ್ಯ ರಾಜ್ಯ ಯುವ ಗೋಷ್ಠಿ ಸಂಪನ್ನ

ಥ್ರೋಬಾಲ್ ಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ

ಯುವ ಸಂಸತ್ತು ಕಾರ್ಯಕ್ರಮಕ್ಕೆ ಆಯ್ಕೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಧರ್ಮಕ್ಷೇತ್ರ ಕುರುಕ್ಷೇತ್ರ ಆಗಬಾರದು!
    In ವಿಶೇಷ ಲೇಖನ
  • ನೆಲಮೂಲ ಸಾಹಿತ್ಯ ರಾಜ್ಯ ಯುವ ಗೋಷ್ಠಿ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಥ್ರೋಬಾಲ್ ಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ
    In (ರಾಜ್ಯ ) ಜಿಲ್ಲೆ
  • ಯುವ ಸಂಸತ್ತು ಕಾರ್ಯಕ್ರಮಕ್ಕೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಸ್ಮರಣೆಯ ಬೆಳಕಿನಲ್ಲಿ ಶರಣ ಸಂಸ್ಕೃತಿಯ ದೀಪ :ಡಾ.ಆಲೂರ
    In (ರಾಜ್ಯ ) ಜಿಲ್ಲೆ
  • ಬೆತ್ತಲೆಯಾಗಿ ಜೀವಿಸುವ ಗ್ರಾಮ
    In ವಿಶೇಷ ಲೇಖನ
  • ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 06,2026
    In ದಿನಪತ್ರಿಕೆ
  • ಗ್ರಾಮೀಣ ಕ್ರೀಢೆಗಳನ್ನು ಉಳಿಸಿ ಬೆಳೆಸಬೇಕಿದೆ :ಶಾಸಕ ಸವದಿ
    In (ರಾಜ್ಯ ) ಜಿಲ್ಲೆ
  • ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.