Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಧರ್ಮಕ್ಷೇತ್ರ ಕುರುಕ್ಷೇತ್ರ ಆಗಬಾರದು!

ನೆಲಮೂಲ ಸಾಹಿತ್ಯ ರಾಜ್ಯ ಯುವ ಗೋಷ್ಠಿ ಸಂಪನ್ನ

ಥ್ರೋಬಾಲ್ ಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಬೆತ್ತಲೆಯಾಗಿ ಜೀವಿಸುವ ಗ್ರಾಮ
ವಿಶೇಷ ಲೇಖನ

ಬೆತ್ತಲೆಯಾಗಿ ಜೀವಿಸುವ ಗ್ರಾಮ

By No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

– ಸಂತೋಷ್ ರಾವ್ ಪೆರ್ಮುಡ.ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ – ದ.ಕ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಮನುಷ್ಯನು ತನ್ನ ದೇಹವನ್ನು ಮುಚ್ಚಲು ಧರಿಸುವ ವಿವಿಧ ರೀತಿಯ ವಸ್ತುಗಳನ್ನು ಬಟ್ಟೆ ಎಂದು ಕರೆಯುತ್ತೇವೆ. ಮನುಷ್ಯನ ದೇಹವನ್ನು ಬಾಹ್ಯ ಪರಿಸರದಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು ಮತ್ತು ನಮ್ಮ ದೇಹವನ್ನು ಬೆಚ್ಚಗಾಗಿ ಇಟ್ಟುಕೊಳ್ಳಬೇಕು. ಆದಿಮಾನವನು ತನ್ನ ದೇಹವನ್ನು ಮುಚ್ಚಲು ಮರದ ಎಲೆಗಳು, ತೊಗಟೆ ಮತ್ತು ಪ್ರಾಣಿಗಳ ಚರ್ಮವನ್ನು ಸುತ್ತಿಕೊಳ್ಳುತ್ತಿದ್ದನು. ಮನುಷ್ಯನು ಬಟ್ಟೆಗಳ ರೀತಿಯ ವಸ್ತುಗಳನ್ನು ಮಾನವನ್ನು ಮುಚ್ಚಿಕೊಳ್ಳಲು ಬಟ್ಟೆಯ ರೀತಿ ಬಳಸಲು ಪ್ರಾಂಭಿಸಿದ ಕುರಿತು ಸುಮಾರು ಒಂದು ಮಿಲಿಯನ್ ವರ್ಷಗಳ ಹಿಂದೆ ಉಲ್ಲೇಖಗಳು ಇತಿಹಾಸದ ಪುಟಗಳನ್ನು ತಿರುವಿದಾಗ ದೊರೆಯುತ್ತದೆ.
ಬಹುಶಃ ಮರದ ತೊಗಟೆ, ಪ್ರಾಣಿಗಳ ಚರ್ಮ ಮತ್ತು ಎಲೆಗಳೇ ಮನುಷ್ಯನ ಮೊದಲ ಉಡುಗೆ ಎನ್ನಬಹುದು. ಈಗ ಬಟ್ಟೆ ಮತ್ತು ಉಡುಪುಗಳು ಮಾನವ ನಾಗರಿಕತೆಯ ಮುಖ್ಯ ಸಂಕೇತ ಆಗಿಬಿಟ್ಟಿದೆ. ಬಟ್ಟೆ ಎಂದರೆ ದೇಹವನ್ನು ಮುಚ್ಚಲು ಅಥವಾ ದೇಹದ ಮೇಲೆ ಧರಿಸಲು ಉದ್ದೇಶಿಸಿರುವ ಹೊದಿಕೆಗಳು ಅಥವಾ ಬಳಸುವ ವಸ್ತುಗಳು ಎನ್ನುವ ಅರ್ಥವಿದೆ. ನಾಗರಿಕತೆಯ ಬೆಳೆದಂತೆಲ್ಲಾ ಮನುಷ್ಯನು ಸಭ್ಯತೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು, ಆಡಂಬರ ಮತ್ತು ಸೌದರ್ಯವನ್ನು ತೋರ್ಪಡಿಸಲು ಬಟ್ಟೆಗಳ ಪ್ರಾಮುಖ್ಯತೆಯೂ ಹೆಚ್ಚುತ್ತಾ ಹೋಗುತ್ತಿದೆ. ಇಂದು ಬಟ್ಟೆಯು ಮಾನವ ಜೀವನದ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ.


ಇಂದು ಬಟ್ಟೆ ಧರಿಸದ ಮನುಷ್ಯನನ್ನು ಊಹಿಸಲೂ ಸಾಧವಿಲ್ಲ, ಎಲ್ಲೇ ಹೊರಗಡೆ ಹೋಗುವುದಿದ್ದರೂ ಬಟ್ಟೆ ಧರಿಸಿಯೇ ಹೋಗುತ್ತಾರೆ. ಆದರೆ ಯುರೋಪ್‌ನ ಬ್ರಿಟನ್‌ನಲ್ಲಿ ಒಂದು ರಹಸ್ಯ ಗ್ರಾಮವಿದೆ ಅಲ್ಲಿ ಜನರು ಸಾಕಷ್ಟು ಹಣ ಮತ್ತು ಐಷಾರಾಮಿ ಜೀವನಶೈಲಿ ಇದ್ದರೂ ಹಲವಾರು ವರ್ಷಗಳಿಂದ ಬಟ್ಟೆಯನ್ನೇ ಧರಿಸದೇ ಬದುಕುತ್ತಿದ್ದಾರೆ. ಯುರೋಪಿಯನ್ನರು ಮೊದಲು ನಾಗರೀಕರಾದರು, ನಂತರ ಅವರನ್ನು ನೋಡಿ ಜಗತ್ತು ನಾಗರೀಕವಾಯಿತು ಎಂದು ಇತಿಹಾಸ ಹೇಳುತ್ತದೆ. ಆದರೆ ಯುರೋಪಿನ ಈ ಒಂದು ಗ್ರಾಮದ ಜನರು ಆಫ್ರಿಕಾದ ಕೆಲವು ಬುಡಕಟ್ಟು ಜನರಂತೆ ಬೆತ್ತಲೆಯಾಗಿ ವಾಸಿಸುತ್ತಾರೆ. ಬ್ರಿಟನ್ ಹರ್ಟ್ ಫೋರ್ಡ್ ಶೈರ್ ಕೌಂಟಿಯ ಸ್ಪೀಲ್ ಪ್ಲಾಟ್ಸ್. ಗ್ರಾಮದ ಜನರು ವರ್ಷಪೂರ್ತಿ ಬಟ್ಟೆ ಧರಿಸದೆಯೇ ನಗ್ನರಾಗಿ ಜೀವನ ಸಾಗಿಸುತ್ತಿದ್ದಾರೆ. ಕಳೆದ ತೊಂಬತ್ತು ವರ್ಷಗಳಿಂದ ಈ ವಿಚಿತ್ರ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿರುವ ಈ ಹಳ್ಳಿಯ ಜನರು ಬಟ್ಟೆಯೇ ಇಲ್ಲದೆ ಜೀವನ ನಡೆಸುತ್ತಿದ್ದಾರೆ. ಜರಾವಾ, ಹಿಂಬಾ ಮತ್ತು ಸೆಂಟಿನೆಲ್ ಎನ್ನುವ ಬುಡಕಟ್ಟು ಜನರು ಇಂದಿಗೂ ಬಟ್ಟೆಗಳನ್ನು ಧರಿಸುವುದಿಲ್ಲ. ಆದರೆ ತಾವು ವಿಶ್ವದ ಅತ್ಯಂತ ಸುಸಂಸ್ಕೃತರು ಎಂದು ಯುರೋಪ್ ದೇಶದ ಜನರು ಹೇಳಿಕೊಳ್ಳುತ್ತಾರೆ. ಆದರೆ ಈ ಒಂದು ಹಳ್ಳಿಯ ಜನರು ನಗ್ನರಾಗಿಯೇ ವಾಸಿಸುತ್ತಾರೆ. ಈ ಊರಿನ ಜನರೆಲ್ಲ ಬಡವರು ಅಥವಾ ಧರಿಸಲು ವಸ್ತçವಿಲ್ಲ ಎಂದಲ್ಲ. ಬದಲಿಗೆ ಇದು ಈ ಊರಿನಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.
ನಮ್ಮ ದೇಶದಲ್ಲಿ ವರ್ಷಕ್ಕೆ ೫ ದಿನ ಮಹಿಳೆಯರು ಬಟ್ಟೆ ಧರಿಸದ ಗ್ರಾಮವೊಂದಿದೆ. ಅದು ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯ ಪಿನಿ ಗ್ರಾಮದಲ್ಲಿ ವಾಸಿಸುವ ಮಹಿಳೆಯರು ವರ್ಷದಲ್ಲಿ ೫ ದಿನಗಳ ಕಾಲ ಬೆತ್ತಲೆಯಾಗಿ ರುತ್ತಾರೆ. ಈ ಸಂಪದ್ಧತಿಯನ್ನು ಇಲ್ಲಿನ ಮಹಿಳೆಯರು ಶ್ರಾವಣ ಮಾಸದ ಸಂದರ್ಭದಲ್ಲಿ ಅನುಸರಿಸುತ್ತಾರೆ. ಈ ೫ ದಿನಗಳ ಅವಧಿಯಲ್ಲಿ ಮಹಿಳೆಯರು ಪುರುಷರ ಮುಂದೆ ಬರುವುದಿಲ್ಲ, ಮನೆಗೆ ಬೀಗ ಹಾಕುವುದಿಲ್ಲ ಮತ್ತು ಯಾರನ್ನು ನೋಡಿಯೂ ಮುಗುಳ್ಳಗೆ ಬೀರುವುದಿಲ್ಲ. ಈ ಪದ್ಧತಿಯನ್ನು ಹಲವು ಶತಮಾನಗಳ ಕಾಲದಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ.
ಇಲ್ಲಿ ಜನರು ಶ್ರೀಮಂತ-ಬಡವ,, ಗಂಡು-ಹೆಣ್ಣು ಮೇಲ್ಜಾತಿ-ಕೆಳಜಾತಿ ಎನ್ನುವ ಭೇದವಿಲ್ಲದೇ ಹೆಂಗಸರು, ಗಂಡಸರು, ಮಕ್ಕಳು ಎಲ್ಲರೂ ನಗ್ನರಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಜನರು ಉತ್ತಮ ಜ್ಞಾನಿಗಳು ಮತ್ತು ಸಿರಿವಂತರು ಆಗಿದ್ದು, ಸಾಮಾನ್ಯರಂತೆ ಈ ಗ್ರಾಮದ ಜನರೂ ಕ್ಲಬ್, ಪಬ್, ಈಜುಕೊಳಗಳನ್ನು ಬಳಸುತ್ತಾರೆ. ಆದರೆ, ಇಲ್ಲಿನ ಗ್ರಾಮಸ್ಥರು ಬಟ್ಟೆ ಮಾತ್ರ ಖರೀದಿಸುವುದಿಲ್ಲ ಮತ್ತು ಧರಿಸುವುದಿಲ್ಲ. ಮಕ್ಕಳು-ವೃದ್ಧರು, ಹೆಂಗಸರು-ಪುರುಷರು, ಎಲ್ಲರೂ ಬಟ್ಟೆಯಿಲ್ಲದೆ ಬದುಕುತ್ತಾರೆ. ಇದು ಅಲ್ಲಿನ ಜನರಿಗೆ ಯಾವುದೇ ರೀತಿಯ ತೊಂದರೆಗಳನ್ನು ಉಂಟುಮಾಡುವುದಿಲ್ಲ. ಆದರೆ ಇಲ್ಲಿನ ಜನರು ತಮ್ಮ ಹಳ್ಳಿಯನ್ನು ಬಿಟ್ಟು ಪಟ್ಟಣಗಳಿಗೆ ಹೋಗುವಾಗ ಬಟ್ಟೆಯನ್ನು ಧರಿಸುತ್ತಾರೆ. ಅದೇ ರೀತಿ ಪಟ್ಟಣದಿಂದ ಮರಳಿ ಬಂದ ತಕ್ಷಣ ಅವರು ಮತ್ತೆ ಬಟ್ಟೆ ಇಲ್ಲದೆ ನಗ್ನರಾಗಿ ಬದುಕಲು ಪ್ರಾರಂಭಿಸುತ್ತಾರೆ.
ಇಲ್ಲಿನ ಜನರು ತಾವು ಬಂಧನಗಳಿಂದ ಮುಕ್ತವಾಗಿ ಮತ್ತು ಹಾಯಾಗಿ ಇರುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಈ ಹಳ್ಳಿಯ ಜನರು ಪರಸ್ಪರ ಒಬ್ಬರಿಗೊಬ್ಬರು ಬೆರೆಯುತ್ತಾರೆ. ಪ್ರಾರಂಭಿಕ ದಿನಗಳಲ್ಲಿ ಈ ಹಳ್ಳಿಗರ ಇಂತಹ ವಿಚಿತ್ರ ಪದ್ಧತಿಯ ಅನುಸರಣೆ ಮತ್ತು ಸಂಪ್ರದಾಯವನ್ನು ಕೆಲವು ಸಾಮಾಜಿಕ ಸಂಘಟನೆಗಳು ವಿರೋಧ ಮಾಡುತ್ತಿದ್ದವು. ಆದರೆ ಪ್ರಸ್ತುತ ಈ ಪದ್ಧತಿಯ ಬಗ್ಗೆ ಯಾರೂ ಏನನ್ನೂ ಹೇಳುತ್ತಿಲ್ಲ. ಆದರೆ ಈ ಹಳ್ಳಿಯ ಜನರು ತೀರಾ ಚಳಿಯ ಸಂದರ್ಭಗಳಲ್ಲಿ ಬಟ್ಟೆಯನ್ನು ಧರಿಸಬಹುದು. ಅವರು ಬಟ್ಟೆ ಧರಿಸುವುದು ಅಥವಾ ಧರಿಸದೇ ಇರುವುದನ್ನು ತಡೆಯುವುದು ಅಥವಾ ಒತ್ತಡ ಹಾಕುವುದನ್ನು ಇಲ್ಲಿನ ಜನರು ಯಾವತ್ತೂ ಮಾಡುವುದಿಲ್ಲ. ಈ ನಿರ್ಧಾರವು ಅವರಿಗೇ ಮುಕ್ತವಾಗಿರುತ್ತದೆ. ಇಲ್ಲಿಗೆ ಭೇಟಿ ನೀಡಲೆಂದು ತೆರಳುವ ಪ್ರವಾಸಿಗರು ಅಲ್ಲಿಯೇ ಉಳಿದುಕೊಳ್ಳುವುದಿದ್ದಲ್ಲಿ ಅವರೂ ನಗ್ನರಾಗಿಯೇ ಇರಬೇಕು ಎನ್ನುವ ನಿಯಮವಿದೆ.
ಈ ಗ್ರಾಮದಲ್ಲಿ ಯಾವುದೇ ಮೂಲ ಸೌಕರ್ಯಗಳ ಕೊರತೆ ಇಲ್ಲ. ಬ್ರಿಟನ್‌ನ ಇತರ ಭಾಗಗಳಂತೆ, ಇಲ್ಲಿಯ ಸ್ಥಿತಿಯೂ ತೀರಾ ಮುಂದುವರಿದಿದೆ. ಇಲ್ಲಿನ ಪ್ರತಿಯೊಂದು ಮನೆಗಳು ಎರಡು ಬೆಡ್ ರೂಂ ಮನೆಗಳಾಗಿದ್ದು, ಇದರ ಬೆಲೆ ಕನಿಷ್ಟ ೮೫,೦೦೦ ಯುರೋಪಿಯನ್ ಪೌಂಡ್‌ಗಿಂತಲೂ ಹೆಚ್ಚಿದೆ ಎಂದು ದಿ ಮಿರರ್ ಉಲ್ಲೇಖಿಸಿದೆ. ಆದರೆ ಈ ಸಂಪ್ರದಾಯವನ್ನು ನಂಬುವ ಜನರು ಬಟ್ಟೆ ಇಲ್ಲದೆ ವಾಸಿಸುತ್ತಾರೆ. ದಿ ಮಿರರ್.ಕಾಂ ವೆಬ್‌ಸೈಟ್ ಪ್ರಕಾರ ಈ ಗ್ರಾಮವು ಹರ್ಟ್ಫೋರ್ಡ್ಶೈರ್ ಬಳಿ ಇದ್ದು, ಈ ಗ್ರಾಮದ ಜನರು ನಗ್ನತೆ ಎನ್ನುವ ಪದ್ಧತಿಯನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಇಲ್ಲಿನ ಮನೆಗಳು ಒಂದನ್ನು ಇನ್ನೊಂದು ಮೀರಿಸುವಂತೆ ಭವ್ಯ ಮತ್ತು ಐಷಾರಾಮಿ ಆಗಿದ್ದು, ಈ ಗ್ರಾಮದಲ್ಲಿ ಬಾರ್ ಕೂಡ ಇದೆ. ಸ್ಪೀಲ್‌ಪ್ಲಾಟ್ಜ್ ಗ್ರಾಮವು ಸದಾ ಚರ್ಚೆಯ ಕೇಂದ್ರ ಬಿಂದುವಾಗಿದ್ದು, ಹೊರ ಪ್ರದೇಶದ ಜನರು ಇಲ್ಲಿಗೆ ಬಂದು ಛಾಯಾಚಿತ್ರಗಳನ್ನು ತೆಗೆದುಕೊಂಡು ಸಾಕ್ಷ್ಯಚಿತ್ರಗಳನ್ನೂ ಮಾಡಿದ್ದಾರೆ. ಇಲ್ಲಿನ ಜನರ ಬಗ್ಗೆಯೂ ಕೆಲವು ಕಿರುಚಿತ್ರಗಳನ್ನು ಮಾಡಲಾಗಿದೆ. ಈ ಗ್ರಾಮದ ಹೆಸರಾದ ಸ್ಪೀಲ್‌ಪ್ಲಾಟ್ಜ್ ಇದರ ಅರ್ಥ ‘ಆಟದ ಮೈದಾನ’.


ಈ ಹಳ್ಳಿಯ ಜನರು ಪ್ರಪಂಚದ ಇತರ ಭಾಗದಿಂದ ದೂರವಾಗಿದ್ದು, ಇವರು ಪ್ರಪಂಚದೊಂದಿಗೆ ಸಂಪರ್ಕ ಹೊಂದಿಲ್ಲ. ಜಗತ್ತಿನ ವಿವಿಧ ದೇಶಗಳ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಪೋಸ್ಟ್ ಮ್ಯಾನ್‌ಗಳು, ಆನ್ಲೈನ್ ವಿತರಣೆಯ ಡೆಲಿವರಿ ಬಾಯ್‌ಗಳೂ ಇಲ್ಲಿಗೆ ಬರುತ್ತಾರೆ. ಈ ಗ್ರಾಮವು ಬ್ರಿಟನ್‌ನ ಅತ್ಯಂತ ಹಳೆಯ ವಸಾಹತು. ಸ್ಪೀಲ್‌ಪ್ಲಾಟ್ಜೆ ಹಳ್ಳಿಯ ವಿಚಿತ್ರ ಬದುಕನ್ನು ಸಂತಸದಿಂದ ಕಳೆಯುತ್ತಿರುವವರಲ್ಲಿ ೮೨ ವರ್ಷದ ಐಸಲ್ಟ್ ರಿಚರ್ಡ್ಸನ್ ಎಂಬ ಹಿರಿಯರೂ ಇದ್ದಾರೆ. ಇವರ ತಂದೆ ೧೯೨೯ ರಲ್ಲಿ ಈ ಸಮುದಾಯವನ್ನು ಸ್ಥಾಪಿಸಿದ್ದು, ಅವರು ರಸ್ತೆಯಲ್ಲಿ ವಾಸಿಸುವ ಜನರು ಮತ್ತು ನೈಸರ್ಗಿಕ ಜೀವನ ನಡೆಸುವವರ ಮಧ್ಯೆ ಯಾವುದೇ ದೊಡ್ಡ ಮಟ್ಟದ ವ್ಯತ್ಯಾಸ ಇಲ್ಲ ಎಂದು ಅವರು ಹೇಳುತ್ತಿದ್ದರು.
ಇಲ್ಲಿ ಎಲ್ಲರೂ ಸಾಮಾನ್ಯರಂತೆ ಜೀವನವನ್ನು ನಡೆಸುತ್ತಾರೆ, ಈ ಹಳ್ಳಿಗೆ ಪ್ರತಿದಿನ ಹಾಲಿನವನು ಹಾಲು ಹಾಕುತ್ತಾನೆ, ಮತ್ತು ಪೇಪರ್ ಬಾಯ್ ಪೇಪರ್ ಹಾಕುತ್ತಾನೆ. ಅಂಚೆಯವನು ಮತ್ತು ವ್ಯಾಪಾರಿಗಳು ಈ ಹಳ್ಳಿಯ ಬಗ್ಗೆ ತಿಳಿದಿದ್ದು, ಇಲ್ಲಿ ವ್ಯವಹಾರವನ್ನು ಮಾಡುತ್ತಾರೆ. ಅಲ್ಲದೇ ಇಲ್ಲಿನ ಪದ್ಧತಿಯನ್ನು ಕಂಡು ವಿಚಲಿತರಾಗುವುದಿಲ್ಲ. ೧೯೨೯ ರಲ್ಲಿ ೫೦೦ ಪೌಂಡ್‌ಗೆ ೧೨ ಎಕರೆ ನಿವೇಶನವನ್ನು ಖರೀದಿಸಿದ ಐಸೊಲ್ಟ್ನ ತಂದೆ ಚಾರ್ಲ್ಸ್ ಮಕಾಸ್ಕಿ ಈ ಗ್ರಾಮವನ್ನು ಸ್ಥಾಪಿಸಿದರು. ಇಲ್ಲಿ ಸುಮಾರು ೩೪ ಮಂದಿ ಮಾಲೀಕರ ಸ್ಮಾರ್ಟ್ ಬಂಗಲೆಗಳಿದ್ದು, ಬೇಸಿಗೆಯಲ್ಲಿ ಇಲ್ಲಿಗೆ ಆಗಮಿಸುವ ಸಂದರ್ಶಕರಿಗೆ ೨೪ ಬಾಡಿಗೆ ಮನೆಗಳೂ ಇವೆ. ಇಲ್ಲಿನ ಮನೆಗಳು ಎರಡು ಬೆಡ್ ರೂಂ ಮನೆಗಳಾಗಿದ್ದು, ವಿದ್ಯುತ್ ಸಂಪರ್ಕ, ನೀರು ಮತ್ತು ಒಳಚರಂಡಿ ಮುಂತಾದ ಅತ್ಯಾಧುನಿಕ ವ್ಯವಸ್ಥೆಗಳಿಂದ ಕೂಡಿದೆ. ಹಳ್ಳಿಯ ಮುಖ್ಯಭಾಗದಲ್ಲಿ ಕ್ಲಬ್ ಹೌಸ್ ಇದ್ದು, ಇಲ್ಲಿ ಇಲ್ಲಿನ ನಿವಾಸಿಗಳು ಡಿಸ್ಕೋ, ಕ್ಯಾರಿಯೋಕೆ ಸೆಷನ್‌ಗಳು, ರಸಪ್ರಶ್ನೆ ಮತ್ತು ಪೂಲ್ ಪಂದ್ಯಗಳಿಗೆ ಒಟ್ಟು ಸೇರುತ್ತಾರೆ. ಇಲ್ಲಿನ ರಸ್ತೆಗಳು ಸಹಿರಿನಿಂದ ಕೂಡಿದ ಸಾಲು ಮರಗಳಿಂದ ಕೂಡಿದೆ.
ಇಲ್ಲಿ ಮನೆಗಳನ್ನು ಖರೀದಿಸಲು ಇತರರಿಗೂ ಅವಕಾಶವಿದ್ದು, ಇಲ್ಲಿ ಜೀವನ ಮಾಡಬೇಕೆಂದರೆ ಎಲ್ಲರೂ ನಗ್ನರಾಗಿಯೇ ಇರಬೇಕು ಎನ್ನುವ ನಿಯಮವಿದೆ. ಇಸೆಲ್ಟ್ ಅವರ ಪ್ರಕಾರ, ಇಲ್ಲಿ ಆಸ್ತಿಯನ್ನು ಖರೀದಿಸುವ ಎಲ್ಲರೂ ಕನಿಷ್ಟ ಒಂದು ವರ್ಷದವರೆಗೆ ಅರೆಕಾಲಿಕ ಸದಸ್ಯರಾಗಿರುತ್ತಾರೆ. ಒಟ್ಟಾರೆಯಾಗಿ ಆಧುನೀಕತೆಯು ಬೆಳೆದಂತೆಲ್ಲಾ ಒಂದು ಹಂತದವರೆಗೆ ಮಾನವ ಮೈಪೂರ್ತಿ ಮುಚ್ಚುವ ಬಟ್ಟೆಗಳನ್ನು ಧರಿಸುತ್ತಿದ್ದ. ಮತ್ತೆ ಇಂದು ಆಧುನೀಕತೆಯ ಗಾಳಿಯಲ್ಲಿ ಮನುಷ್ಯನ ಮೈ ಮುಚ್ಚುವ ಬಟ್ಟೆಯೇ ಕಡಿಮೆಯಾಗುತ್ತ ಸಾಗಿದೆ. ಇಂತಹ ಬೆಳವಣಿಗೆಗಳ ನಡುವೆಯೇ ಒಊರ್ತಿ ಗ್ರಾಮದ ಜನರೇ ಸಂಪೂರ್ಣ ಬೆತ್ತಲಾಗಿಯೇ ಇದ್ದು ಜೀವನ ಸಾಗಿಸುತ್ತಿರುವುದು ಇಂದಿನ ದಿನಗಳಲ್ಲಿ ಬಹುಶಃ ಅಚ್ಚರಿ ಮತ್ತು ಕುತೂಹಲದ ವಿಚಾರ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಧರ್ಮಕ್ಷೇತ್ರ ಕುರುಕ್ಷೇತ್ರ ಆಗಬಾರದು!

ನೆಲಮೂಲ ಸಾಹಿತ್ಯ ರಾಜ್ಯ ಯುವ ಗೋಷ್ಠಿ ಸಂಪನ್ನ

ಥ್ರೋಬಾಲ್ ಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ

ಯುವ ಸಂಸತ್ತು ಕಾರ್ಯಕ್ರಮಕ್ಕೆ ಆಯ್ಕೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಧರ್ಮಕ್ಷೇತ್ರ ಕುರುಕ್ಷೇತ್ರ ಆಗಬಾರದು!
    In ವಿಶೇಷ ಲೇಖನ
  • ನೆಲಮೂಲ ಸಾಹಿತ್ಯ ರಾಜ್ಯ ಯುವ ಗೋಷ್ಠಿ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಥ್ರೋಬಾಲ್ ಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ
    In (ರಾಜ್ಯ ) ಜಿಲ್ಲೆ
  • ಯುವ ಸಂಸತ್ತು ಕಾರ್ಯಕ್ರಮಕ್ಕೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಸ್ಮರಣೆಯ ಬೆಳಕಿನಲ್ಲಿ ಶರಣ ಸಂಸ್ಕೃತಿಯ ದೀಪ :ಡಾ.ಆಲೂರ
    In (ರಾಜ್ಯ ) ಜಿಲ್ಲೆ
  • ಬೆತ್ತಲೆಯಾಗಿ ಜೀವಿಸುವ ಗ್ರಾಮ
    In ವಿಶೇಷ ಲೇಖನ
  • ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 06,2026
    In ದಿನಪತ್ರಿಕೆ
  • ಗ್ರಾಮೀಣ ಕ್ರೀಢೆಗಳನ್ನು ಉಳಿಸಿ ಬೆಳೆಸಬೇಕಿದೆ :ಶಾಸಕ ಸವದಿ
    In (ರಾಜ್ಯ ) ಜಿಲ್ಲೆ
  • ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.