ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತೀಯ ಸಾಹಿತ್ಯಗಳ ತಾಯಿಬೇರು ಮಹಾಭಾರತ ಮತ್ತು ರಾಮಾಯಣ. ಅದು ಭಾರತೀಯ ಸಾಹಿತ್ಯಕ್ಕೆ ರಾಜಮಾರ್ಗ ಅದರ ಆಧಾರದ ಮೇಲೆ ಮಾತನಾಡಿದ ಯುವಕರ ಆಸಕ್ತಿ ಮತ್ತು ಅಧ್ಯಯನ ಅತ್ಯಂತ ಖುಷಿ ತಂದಿದೆ ಎಂದು ಪ್ರೊ.ಸುಮಾ ಸಾವಂತ್ ಹೇಳಿದರು
ಭಾನುವಾರ ನಗರದ ಭಾವಸಾರ ಕ್ಷತ್ರೀಯ ಸಾಂಸ್ಕೃತಿಕ ಭವನ ಆನಂದ ನಗರದಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜನೆಯ ನೆಲಮೂಲ ಸಾಹಿತ್ಯ – ಚರಿತ್ರೆ, ತಾತ್ವಿಕತೆ ಮತ್ತು ಪ್ರಸ್ತುತೆ ಎಂಬ ರಾಜ್ಯ ಮಟ್ಟದ ಯುವ ಗೋಷ್ಠಿಯ ಸಮಾರೋಪದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಾಧ್ಯಕ್ಷ ಎಸ್.ಜಿ. ಕೋಟಿ ಅವರು, ಯುವ ಜನತೆ ಧ್ವನಿ ಸಮಾಜವನ್ನು ತಲುಪಬೇಕು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಯುವಕರಲ್ಲಿ ನೈಜ ಸಾಹಿತ್ಯದ ಪ್ರೇರಣೆಯನ್ನು ನೀಡುವ ಪ್ರಯತ್ನ ಮಾಡಲಾಗಿದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಪರಿಷದ್ ನ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಮಾಯಾ ಬಾಲಚಂದ್ರ ಅತಿಥಿ ಮಾತುಗಳನ್ನಾಡಿದರು.
ಯುವಗೋಷ್ಟಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ 15 ಯುವ ಸಾಹಿತ್ಯಾಭ್ಯಾಸಿಗಳು ನೆಲಮೂಲದ ಸಾಹಿತ್ಯದ ಕುರಿತು ವಿಚಾರ ಮಂಡನೆ ಮಾಡಿದರು.
ನಿರೂಪಣೆ ರಾಮು , ಸ್ವಾಗತ ಮಯೂರ ತಿಳಗೂಳಕರ , ವಂದನಾರ್ಪಣೆ ಅಭಾಸಾಪ ಜಿಲ್ಲಾಧ್ಯಕ್ಷರಾದ ವಿವೇಕ್ ಕುಲಕರ್ಣಿ ನಿರ್ವಹಿಸಿದರು.
ವಂದೇ ಮಾತರಂ ಗೀತೆಯನ್ನು ಬಲವಂತ ಕುಲಕರ್ಣಿ ಹಾಡಿದರು.
ಕಾರ್ಯಕ್ರಮದಲ್ಲಿ ಆನಂದ ಗೋಡಸೆ, ಯುವ ಪ್ರಕಾರ ಪ್ರಮುಖರಾದ ಡಾ. ರಾಹುಲ್ ಮರಳಿ , ಶ್ರೀರಂಗ ಕುಲಕರ್ಣಿ , ನಾರಾಯಣ ಶೇವರೆ , ಗಣೇಶ ಅಡಿಗ , ಸುಕಾಂತ ಕುಲಕರ್ಣಿ ,ಶಿವಶರಣ ಗೋಡ್ರಾಲ್ , ಶ್ರೀರಂಜನಿ ದತ್ತಾತ್ರಿ , ಅಶೋಕ ರಾಯ್ಕರ್ , ಚಂದ್ರಿಕಾ ಬಳ್ಳಾರಿ , ಶ್ರೀರಂಗ ಪುರಾಣಿಕ , ಮಾಧುರಿ ಕುಲಕರ್ಣಿ ,ಭಾರತಿ ಗೋಡಸೆ ,ಚಿದಂಬರ ಪಾಟೀಲ , ಪ್ರಿಯಾ ಹರಿದಾಸ ,ಅನಿಲ ಬೆಳುಂಡಗಿ ,ಶಂಕರ ಮಳ್ಳಿ , ಸುಭಾಸ ಕನ್ನೂರ , ಸುಭಾಷ ಯಾದವಾಡ ಸೇರಿ ಅನೇಕರು ಉಪಸ್ಥಿತರಾಗಿದ್ದರು.

