ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲೆಂಟ್ ಕಾಲೇಜ್ ಆಪ್ ನರ್ಸಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳ ದೀಪದಾನ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನರ್ಸ್ ವೃತ್ತಿಯು ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದ್ದು, ನರ್ಸಗಳು ರೋಗಿಗಳ ಪಾಲಿನ ನಿಜವಾದ ಆಪದ್ಬಾಂಧವರಾಗಿದ್ದಾರೆ, ವಿದ್ಯಾರ್ಥಿಗಳು ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ, ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ್ ಮಾಸ್ತಿಹೊಳಿ ಹೇಳಿದರು.
ಅವರು ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲೆಂಟ್ ಕಾಲೇಜ್ ಆಪ್ ನರ್ಸಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳ ದೀಪದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರು ಹಾಗೂ ಆಕ್ಸ್ಫರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಮಾತನಾಡಿ ” ರೋಗಿಗಳಲ್ಲಿ ಭಗವಂತನನ್ನು ಕಂಡು ನಿಮ್ಮ ವೃತ್ತಿಯ ಪಾವಿತ್ರ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಲ್ಲಿ ವಿನಂತಿಸಿಕೊಂಡ ಅವರು ನಿಮ್ಮ ಜೀವನದಲ್ಲಿ ಪರೋಪಕಾರ ಮಾಡುವುದರಿಂದ ಸಿಗುವ ಆತ್ಮ ತೃಪ್ತಿ ಯಾವುದರಲ್ಲಿಯೂ ಸಿಗುವುದಿಲ್ಲ. ಹಾಗಾಗಿ ನೀವು ಶ್ರೇಷ್ಠ ನರ್ಸ್ ಗಳಾಗಿ ಈ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕೆಂದು ವಿನಂತಿಸಿಕೊಂಡರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ವೈದ್ಯೆ ಶ್ರೀಮತಿ ಡಾ.ಶ್ವೇತಾ ಶರಣ ಮಾತನಾಡಿ “ಒಂದು ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರನ್ನು ಎಷ್ಟು ಅವಲಂಬಿಸಿರುತ್ತಾರೋ ಅದಕ್ಕಿಂತ ಹೆಚ್ಚಿಗೆ ನರ್ಸ್ಗಳನ್ನು ಅವಲಂಬಿಸಿರುತ್ತಾರೆ, ಹಾಗಾಗಿ ನೀವು ತಾಯಿಯಂತೆ ರೋಗಿಗಳ ಆರೈಕೆ ಮಾಡಿ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿ ಎಂದು ಹಾರೈಸಿದರು ” ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜೊತೆಗೆ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಶೇನೇಟ್ ಸದಸ್ಯರಾಗಿ ಆಯ್ಕೆಯಾದ ಡಾ. ಸಂತೋಷ್ ಇಂಡಿ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ ಲಿಂಗದಳ್ಳಿ, ಪ್ರಾಚಾರ್ಯರಾದ ಶ್ವೇತಾ ಬಿರಾದಾರ, ಪ್ರಕಾಶ್ ಸಿದ್ದಾಪುರ, ರಾಜಕುಮಾರ್ ತಿಡಗುಂದಿ ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

