ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಹರನಾಳ ಗ್ರಾಮದಲ್ಲಿ ದಸಂಸ ಕಾರ್ಯಕರ್ತನ ಮೇಲಿನ ಹಲ್ಲೆ ಹಾಗೂ ಹರನಾಳ ಗ್ರಾಮ ಪಂಚಾಯಿತಿ ಅವ್ಯವಹಾರದಲ್ಲಿ ಭಾಗಿಯಾದ ಮಾಜಿ ಅಧ್ಯಕ್ಷ, ಹಾಗೂ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಬಿ.ಕೃಷ್ಣಪ್ಪ ಬಣದವರು, ಪ್ರತಿಭಟನಾ ಮೆರವಣಿಗೆ ಕೈಗೊಂಡು, ತಹಶೀಲ್ದಾರ ಕಾರ್ಯಾಲಯದ ಸಿಬ್ಬಂದಿ ಸಂಗಮೇಶ ಗ್ವಾಳೇದ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಗುರುವಾರ ಸೇರಿದ ದಲಿತ ಸಂಘರ್ಷ ಸಮಿತಿ ಬಿ.ಕೃಷ್ಣಪ್ಪ ಬಣದವರು, ದಸಂಸ ಕಾರ್ಯಕರ್ತನ ಮೇಲಿನ ಹಲ್ಲೆ ಹಾಗೂ ಗ್ರಾಮ ಪಂಚಾಯಿತಿ ಅವ್ಯವಹಾರದಲ್ಲಿ ಭಾಗಿಯಾದ ಮಾಜಿಅಧ್ಯಕ್ಷ, ಹಾಗೂ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೆರವಣಿಗೆ ಹೊರಟು ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಇಂಡಿ ರಸ್ತೆಯ ಮೂಲಕ ತಹಶೀಲ್ದಾರ ಕಾರ್ಯಾಲಯ ತಲುಪಿ ನಂತರ ಸಭೆ ಕೈಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ, ರಾಜ್ಯ ಸಂ.ಸಂಚಾಲಕ ರಮೇಶ ಆಸಂಗಿ, ಬೆಳಗಾವಿ ವಿಭಾಗೀಯ ಸಂಚಾಲಕ ವಿನಾಯಕ ಗುಣಸಾಗರ, ಜಿಲ್ಲಾ ಸಂಚಾಲಕ ಅಶೋಕ ಚಲವಾದಿ, ಸುರೇಶ ನಡಗಡ್ಡಿ ಪರಶುರಾಮ ದಿಂಡವಾರ, ರಾಜು ಮೆಟಗಾರ, ಪಿ.ಎಸ್.ತಳವಾರ, ಫಿರಪ್ಪ ಕಟ್ಟಿಮನಿ, ಗೋನಾಳ ಮಾತನಾಡಿದರು.
ತಾಲ್ಲೂಕು ಸಂಚಾಲಕ ರಾಜಕುಮಾರ ಸಿಂದಗೇರಿ, ರಾವುತಮಾಸ್ತರ ತಳಕೇರಿ, ಮಂಜುನಾಥ ಯಂಟಮಾನ, ಬಸವರಾಜ ಇಂಗಳಗಿ, ಪರಶುರಾಮ ಬಡಿಗೇರ, ಅಶೋಕ ಗುಡಿಸಲಮನಿ, ಪ್ರಕಾಶ ಶಾಂತಗಿರಿ, ಯಮನಪ್ಪ ಭೂತಾಳಿ, ಮಹೇಶ ಮುರಾಳ, ರಾಘವೇಂದ್ರ ಪಡಗಾನೂರ, ಮಹೇಶ ಗುಡಿಮನಿ, ರಮೇಶ ಬನಸೋಡೆ ಸಹಿತ ಇತರರು ಇದ್ದರು.

