ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಹುನ್ನೂರು ಗ್ರಾಮದ ಪ್ರಯಾಣಿಕರ ತಂಗುದಾಣದ ಮುಂಭಾಗದಲ್ಲಿ ವಿಶ್ವ ಜಲ ದಿನದಂದು ನೀರಿನ ಅರವಟಿಗೆ ಸೇವೆಗೆ ಚಾಲನೆ ನೀಡಲಾಯಿತು.
ಪರಿಸರ ಪ್ರಿಯರು, ಜಲದಾನಿಗಳ ಸಹಕಾರದೊಂದಿಗೆ ಹಲವು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ನೀರಿನ ಅರವಟಿಗೆ ಸೇವೆ ಜತೆಗೆ ಜಲದ ಮಹತ್ವದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಯುವಕರ ಗುಂಪೊಂದು ಮಾಡುತ್ತಿದೆ. ಜಗದುಳಿವಿಗೆ ಜಲವುಳಿಸಿ
ಎಂಬ ಘೋಷ ವಾಕ್ಯದೊಂದಿಗೆ ಪ್ರಸಕ್ತ ವರ್ಷ ನೀರಿನ ಅರವಟಿಗೆ ಸೇವೆ ಕೈಗೊಂಡಿರುವುದು ಗಮನ ಸೆಳೆಯಿತು. ಮಾಜಿ ಶಾಸಕ ಆನಂದ ನ್ಯಾಮಗೌಡ ಅರವಟಿಗೆ ಸೇವೆಗೆ ಚಾಲನೆ ನೀಡಿದರು.
ಗ್ರಾಮದ ಹಿರಿಯರಾದ ಚಂದ್ರಶೇಖರ ಸಾವಳಗಿ, ನರಸಪ್ಪ ತೇಲಿ, ಕಲ್ಲಪ್ಪ ದಫೇದಾರ, ಮಲ್ಲಪ್ಪ ಕಡಪಟ್ಟಿ, ರಾಜು ಕಡಪಟ್ಟಿ, ಈಶ್ವರ ಸಾವಳಗಿ, ಲಕ್ಕಪ್ಪ ಮೂಲಿಮನಿ, ರಮೇಶ ಪಾಯಗೊಂಡ, ರಮೇಶ ಬನ್ನವ್ವಗೋಳ ಇತರರು ಇದ್ದರು.

