ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಮ್ಮ ದೇಶ ಕೃಷಿ ಪ್ರಧಾನವಾದದ್ದು ಅದರಂತೆ ವಿದ್ಯಾರ್ಥಿಗಳು ಮಣ್ಣಿನ ಫಲವತ್ತತೆ ಮತ್ತು ನೀರಿನ ಬಗ್ಗೆ ಅರಿಯುವುದು ಅಲ್ಲದೆ ಪ್ರಯೋಗಿಕ ಕಲಿಕೆ ಅವಶ್ಯಕವಾಗಿದೆ ಎಂದು ರಾಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಸ್ ಡಿ ಲಮಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ರಾಸಾಯನಶಾಸ್ತ್ರ ವಿಭಾಗ ಸಹಯೋಗದಲ್ಲಿ ಇಟ್ಟಂಗಿಹಾಳ ಗ್ರಾಮದಲ್ಲಿ ಜರುಗಿದ ಒಂದು ದಿನದ ಮಣ್ಣು ಮತ್ತು ನೀರಿನ ಪರೀಕ್ಷೆಯ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.
ಅಯೋಜಿಸಲಾಯಿತು.
ಮಹಾವಿದ್ಯಾಲಯದ ರಾಸಾಯನಶಾಸ್ತ್ರ ವಿಭಾಗ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮದ ರೈತರು ಜೊತೆಗೂಡಿ ಅವರ ಹೊಲಗದ್ದೆಗಳಿಗೆ ಬೇಟಿ ನೀಡಿ ಅವರ ಹೊಲಗಳಲ್ಲಿನ ಮಣ್ಣು ಮತ್ತು ನೀರು ಸಂಗ್ರಹಣೆ ಮಾಡಿ 78 ರೈತರ ಮಣ್ಣು ಹಾಗೂ 35 ಜಮೀನುಗಳ ನೀರು ಪರೀಕ್ಷೆ ಮಾಡಿ ರೈತರಿಗೆ ವರದಿಯನ್ನು ಸಲ್ಲಿಸಿದರು.
ಡಾ. ಎಸ್ ಡಿ ಲಮಾಣಿ, ಮಹೇಶ್ ಕುಮಾರ್ ಕೆ, ಡಾ ಎಸ್ ಎನ್ ಉಂಕಿ, ಡಾ.ಮಾಲತಿ ಚನಗೊಂಡ್, ಡಾ.ಅನಿಲ್ ಪಾಟೀಲ್ ಬೋಧಕ, ಸಿಬ್ಬಂದಿ ಮಾರ್ಗದರ್ಶನ ನೀಡಿದರು.

