ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೆಹಲಿ ಕಾಶ್ಮೀರ ಗೇಟ್ ಬಳಿ ಇದ್ದ ಶ್ರೀ ವೀರಮಹಾರಾಣಾ ಪ್ರತಾಪ್‌ಸಿಂಹ ಅವರ ಪುಸ್ಥ್ತಳಿಯನ್ನು ದುಷ್ಕರ್ಮಿಗಳು ವಿಕೃತಗೊಳಿಸಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲು ಆಗ್ರಹಿಸಿ ಜಿಲ್ಲಾ ರಜಪೂತ ಸೇವಾ ಅಭಿವೃದ್ಧಿ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆನ್ನೂರ ಮೂಲಕ ದೆಹಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಪರಶುರಾಮಸಿಂಗ್ ರಜಪೂತ ಮಾತನಾಡಿ, ದೆಹಲಿಯಲ್ಲಿ ಇದ್ದ ಶ್ರೀ ವೀರ ಮಹಾರಾಣಾ ಪ್ರತಾಪಸಿಂಹ ಪುತ್ಥಳಿ ವಿಕೃತಗೊಳಿಸಿದ್ದು ಖಂಡನೀಯ. ಅಲ್ಲಿ ಪುತ್ಥಳಿಯನ್ನು ಪುನಃ ಸ್ಥಾಪಿಸಬೇಕು. ಹಾಗೂ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಹತ್ತಿರವಿರುವ ವೀರ ಮಹಾರಾಣಾ ಪ್ರತಾಪಸಿಂಹ ಪುತ್ಥಳಿ ಸುರಕ್ಷತೆಗೆ ಸಿ.ಸಿ. ಕ್ಯಾಮೆರಾ ಅಳವಡಿಸಬೇಕುಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಮೇಶಸಿಂಗ್ ಹಜೇರಿ, ದಿಲೀಪ್ ಹಜೇರಿ, ಸಿದ್ದುಸಿಂಗ ರಜಪೂತ, ಪ್ರಶಾಂತ್ ತೇಲಿ, ಪ್ರತಾಪಸಿಂಗ ರಜಪೂತ, ಎಸ್ ಆರ್ ಹಜೇರಿ, ಸುನಿಲಸಿಂಗ ಸಾದಿವಾಲೆ ಮತ್ತಿತರರು ಇದ್ದರು.

