Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಹೆಣ್ಣು ಹೆತ್ತಳೆಂದು ದೂರದಿರಿ, ಇದಕ್ಕೆ ಪುರುಷನೇ ಹೊಣೆಗಾರ

ವೃತ್ತಿ ಬದ್ದವಾಗಿ ಸಂಘಟನೆ ಬಲಪಡಿಸಲು ತಗಡೂರ ಕರೆ

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಯಿಂದ ಕೃಷ್ಣೆಗೆ ವಿಶೇಷ ಪೂಜೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವಿಜಯಪುರ ಜಿಲ್ಲೆ ಕವಿಗಳ ನಾಡು :ಎಡಿಸಿ ಗೆಣ್ಣೂರ
(ರಾಜ್ಯ ) ಜಿಲ್ಲೆ

ವಿಜಯಪುರ ಜಿಲ್ಲೆ ಕವಿಗಳ ನಾಡು :ಎಡಿಸಿ ಗೆಣ್ಣೂರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕಾವ್ಯ ಹುಟ್ಟುವುದು ಒಂದು ವಿಶಿಷ್ಟ ಸಂದರ್ಭದಲ್ಲಿ. ಕಾವ್ಯದಲ್ಲಿ ರಾಗ, ತಾಳ,ಲಯ, ಪ್ರಾಸಗಳು ಆ ಕವಿತೆಯ ಭಾವವನ್ನು ಹೆಚ್ಚಿಸುವಲ್ಲಿ ತನ್ನದೇಯಾದ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಪ್ರಾಯಪಟ್ಟರು. ತಿಕೋಟಾದ ವಾಡೆಯಲ್ಲಿ ನಡೆದ ತಿಕೋಟಾದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು “ವಿಜಯಪುರ ಜಿಲ್ಲೆ ಕವಿಗಳ ನಾಡು” ಎಂದ ಅವರು ಅಭಿನವ ಪಂಪ ನಾಗಚಂದ್ರನಿಂದ ಹಿಡಿದು ಕುವೆಂಪುರವರ ವರೆಗೆ ಅನೇಕ ಕವಿಗಳು ಹಾಗೂ ಕವಯತ್ರಿಯರು,ಸಾಹಿತಿಗಳು ಕನ್ನಡ ಭಾಷೆಯ,ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುವ ಮೂಲಕ ವಿಜಯಪುರ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ ಎನ್ನುತ್ತ ಕವಿಗಳು ರಚಿಸಿದ ಕವಿತೆ ಜನಸಾಮಾನ್ಯರ, ಓದುಗರ ಹೃದಯ ಗೆಲ್ಲುವಂತಿರಬೇಕು ಎನ್ನುತ್ತ, ಹೆಚ್ಚು ಹೆಚ್ಚು ಅಧ್ಯಯನದಿಂದ ಉತ್ತಮ ಕವಿತೆಗಳು ಹೊರಹೊಮ್ಮಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಮಾತನಾಡುತ್ತ, ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು ಸಮಾಜಮುಖಿಯಾದ, ಪ್ರೀತಿ ವಿಶ್ವಾಸದ ಕೊಂಡಿ ಬೆಸೆಯುವ ಭಾವನಾತ್ಮಕ ಸನ್ನಿವೇಶಗಳನ್ನು ತಮ್ಮ ಕವಿತೆಯ ವಾಚನದಲ್ಲಿ ಅಭಿವ್ಯಕ್ತಪಡಿಸಿದ್ದು, ನಿಜಕ್ಕೂ ಸಂತೋಷದ ಸಂಗತಿ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ ಮಾಧವ ಗುಡಿ ಮಾತನಾಡುತ್ತ ಕಾವ್ಯವು ಒಂದು ರೀತಿಯ ಸಾಹಿತ್ಯವಾಗಿದ್ದು, ಅಥ೯, ಧ್ವನಿ ಮತ್ತು ಲಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿದ ಮತ್ತು ಜೋಡಿಸಲಾದ ಭಾಷೆಯ ಮೂಲಕ ಓದುಗರಲ್ಲಿ ಭಾವನಾತ್ಮಕ ಪ್ರತಿಕ್ರಿಯೆಯನ್ನು ಹುಟ್ಟು ಹಾಕುವ ಗುರಿಯನ್ನು ಒಂದು ಕಾವ್ಯ ಹೊಂದಿರಬೇಕು ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ, ಬಸವಂತರಾಯಗೌಡ ಬಿರಾದಾರ, ಗಾಯಗೊಂಡ ಜಾನಾರ, ಡಾ.ಎಂ.ಆರ್ ಗೋಟ್ಯಾಳ, ಸಿದ್ದಣ್ಣ ಮಂಗೊಂಡ, ಚೆನ್ನಯ್ಯ ಹಿರೇಮಠ, ಮಡಿವಾಳಮ್ಮ ನಾಡಗೌಡ, ಶಿಲ್ಪಾ ಹಂಜಿ, ಶಾಂತಲಾ ಪಾಟೀಲ, ಅಂಬಿಕಾ ಕರಕಪ್ಪಗೋಳ, ಕವಿತಾ ಕಲ್ಯಾಣಪ್ಪಗೋಳ ಮುಂತಾದವರು ಉಪಸ್ಥಿತರಿದ್ದು ಮಾತನಾಡಿದರು.
ಸಮ್ಮೇಳನದ ಸವಾ೯ಧ್ಯಕ್ಷ ತಿಕೋಟಾ ವಿರಕ್ತಮಠದ ಪೂಜ್ಯ ಶ್ರೀ ಮ.ನಿ.ಪ್ರ ಚೆನ್ನಮಲ್ಲಿಕಾರ್ಜುನ ಸ್ವಾಮಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕವಿಗಳಾದ ಸೋನಾಬಾಯಿ ಕಲಾವಂತ, ಶರಣಮ್ಮ ಹಾದಿಮನಿ, ಸಂಗಮೇಶ ಜಂಗಮಶೆಟ್ಟಿ, ಎಂ.ಆಯ್ ಜಿಡ್ಡಿ, ಧರೆಪ್ಪ ಸಿದ್ಧನಾಥ, ರೇಣುಕಾ ಬಿಸನಾಳ, ಸ್ನೇಹಲತಾ ಕದಮ, ರೂಪಾ ರಜಪೂತ, ಮಶ್ಯಾಕ ಗೌಂಡಿ, ಡಾ. ಸೂರ್ಯಕಾಂತ ಹೊಸಮನಿ, ಅಶ್ವಿನಿ ಚೋರಗಿ, ಶಿವಾಜಿ ಮೋರೆ, ಸುಜಾತಾ ಹ್ಯಾಳದ, ಶೃತಿ ಝಂಡೆ, ರಾಜೇಶ್ವರಿ ಟಕ್ಕಳಕಿ, ಶೋಭಾ ಹರಿಜನ, ಸಂತೋಷ ನವಲಗುಂದ, ಲಕ್ಷ್ಮೀ ಕಾತ್ರಾಳ, ಶೃತಿ ಕರಾಂಡೆ, ಮಹಾಂತೇಶ ಪಾಟೀಲ, ನಿಂಗಪ್ಪ ಕಲಘಟಗಿ, ಶಿವಾನಂದ ಚಾವರ, ಸಿದ್ದಪ್ಪ ಕಟೆ, ಜಿ.ಎಸ್ ಲಕ್ಕುಂಡಿಮಠ, ಸುಜಾತಾ ಬಾಗಲಕೋಟ ಸೇರಿದಂತೆ ೨೫ಕ್ಕೂ ಅಧಿಕ ಕವಿಗಳು, ಕವಯತ್ರಿಯರು ಭಾಗವಹಿಸಿ ನಾಡು, ನುಡಿ, ಸಂಸ್ಕೃತಿ, ಪರಂಪರೆಯ ಸುತ್ತ ತಾವು ಹೆಣೆದ ಕವನಗಳನ್ನು ವಾಚಿಸುವ ಮೂಲಕ ಕವಿಗೋಷ್ಠಿಗೆ ಮೆರುಗು ತಂದರು.
ಬೀರಪ್ಪ ನಾಟೀಕಾರ ಸ್ವಾಗತಿಸಿದರು. ಸಾವಿತ್ರಿ ಬಾಗಲಕೋಟ ನಿರೂಪಿಸಿದರು. ಸಿದ್ದಣ್ಣ ಕಟೆ ಹಾಗೂ ನಂದಾ ತಿಕೋಟಿ ನಿವ೯ಹಿಸಿದರು. ಸಂತೋಷ ಬಗಲಿ ವಂದಿಸಿದರು

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಹೆಣ್ಣು ಹೆತ್ತಳೆಂದು ದೂರದಿರಿ, ಇದಕ್ಕೆ ಪುರುಷನೇ ಹೊಣೆಗಾರ

ವೃತ್ತಿ ಬದ್ದವಾಗಿ ಸಂಘಟನೆ ಬಲಪಡಿಸಲು ತಗಡೂರ ಕರೆ

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಯಿಂದ ಕೃಷ್ಣೆಗೆ ವಿಶೇಷ ಪೂಜೆ

ಎಸ್ ಐ ಆರ್: ನಾಗಠಾಣ ಕ್ಷೇತ್ರದಲ್ಲಿ ಶೇ.63.02ರಷ್ಟು ಪ್ರಗತಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಹೆಣ್ಣು ಹೆತ್ತಳೆಂದು ದೂರದಿರಿ, ಇದಕ್ಕೆ ಪುರುಷನೇ ಹೊಣೆಗಾರ
    In ವಿಶೇಷ ಲೇಖನ
  • ವೃತ್ತಿ ಬದ್ದವಾಗಿ ಸಂಘಟನೆ ಬಲಪಡಿಸಲು ತಗಡೂರ ಕರೆ
    In (ರಾಜ್ಯ ) ಜಿಲ್ಲೆ
  • ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಯಿಂದ ಕೃಷ್ಣೆಗೆ ವಿಶೇಷ ಪೂಜೆ
    In (ರಾಜ್ಯ ) ಜಿಲ್ಲೆ
  • ಎಸ್ ಐ ಆರ್: ನಾಗಠಾಣ ಕ್ಷೇತ್ರದಲ್ಲಿ ಶೇ.63.02ರಷ್ಟು ಪ್ರಗತಿ
    In (ರಾಜ್ಯ ) ಜಿಲ್ಲೆ
  • ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ಅಭಿಯಾನ
    In (ರಾಜ್ಯ ) ಜಿಲ್ಲೆ
  • ಕಬ್ಬು ಬೆಳೆಗೆ ಕೃತಕ ತಂತ್ರಜ್ಞಾನ ಬಳಸಿದರೆ ಅಧಿಕ ಬೆಳೆಯಲು ಸಾಧ್ಯ
    In (ರಾಜ್ಯ ) ಜಿಲ್ಲೆ
  • ಜೀವನ ವಿಕಾಸಕ್ಕೆ ಶಿಕ್ಷಣ ಅವಶ್ಯಕ :ರಂಭಾಪುರಿ ಜಗದ್ಗುರು
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕರು ಸುಸಜ್ಜಿತ ಕಾಮಗಾರಿಗೆ ಕೈ ಜೋಡಿಸಿ :ಮನಗೂಳಿ
    In (ರಾಜ್ಯ ) ಜಿಲ್ಲೆ
  • ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆಯಿಂದ ಎಂ.ಡಿ ಮಂಚಯ್ಯ ಅನರ್ಹ
    In (ರಾಜ್ಯ ) ಜಿಲ್ಲೆ
  • ಕೋಟ್ಯಾಳದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸರ್ಕಾರಿ ಶಾಲೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.