ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಮ್ಮೂರ ಸರ್ಕಾರಿ ಶಾಲೆ ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ ಎಂದು ಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ವಿಠ್ಠಲ ರೇವೂರ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡ ವಿದ್ಯಾರ್ಥಿಗಳ ಬಿಳ್ಕೋಡುಗೆ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಶಾರದೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮೂರ ಸರ್ಕಾರಿ ಶಾಲೆಯನ್ನು ಇಡೀ ತಾಲೂಕಿಗೆ ಮಾದರಿ ಶಾಲೆಯನ್ನಾಗಿ ಮಾಡೋಣ ಇದಕ್ಕೆ ಗ್ರಾಮಸ್ಥರ ಹಾಗೂ ಪಾಲಕರ ಸಹಕಾರ ಅತ್ಯಗತ್ಯ ಎಂದರು.
ಕಾರ್ಯಕ್ರಮವನ್ನು ಭೀಮಾ ಶಿಕ್ಷಣ ಸಂಸ್ಥೆಯ ನಿರ್ದೇಶಕ, ಅಭಿಯಂತರ ದತ್ತು ಮಾವೂರ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಶಾಲೆಯಲ್ಲಿ ಕಲಿತು ಉನ್ನತ ವ್ಯಾಸಂಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಮಕ್ಕಳಿಂದ ವಿವಿಧ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದ ಸಾನಿಧ್ಯವನ್ನು ಮಲ್ಲಯ್ಯ ಹಿರೇಮಠ, ಮುಖ್ಯ ಅತಿಥಿಗಳಾಗಿ ಸಾಹೇಬಗೌಡ ಪಾಟೀಲ, ಎಸ್.ಬಿ.ಪಾಟೀಲ, ಡಿ.ಪಿ.ಗಣಿಹಾರ, ಗುರಣ್ಣ ಹುಮನಾಬಾದ, ಬಿ.ಬಿ.ಮಾವೂರ, ಶಂಕರ ಕೋರಳ್ಳಿ, ಶಾಂತಪ್ಪ ರೇವೂರ, ನಾಗೇಶ ರೇಷ್ಮಿ, ಸಿದ್ದು ಮಾದರ, ಶರಣಪ್ಪ ರೇವೂರ ಸೇರಿದಂತೆ ಗ್ರಾಮಸ್ಥರು, ಶಾಲೆಯ ಮುಖ್ಯಗುರುಗಳು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು. ಬಿ.ಎಸ್.ಬಿರಾದಾರ, ಸೋಮನಾಥ ಮಠ ಕಾರ್ಯಕ್ರಮ ನಿರ್ವಹಿಸಿದರು.

