ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತುಬಚಿ ಬಬಲೇಶ್ವರ ಯೋಜನೆ ಮೂಲಕ ತಿಕೋಟಾ ಭಾಗದ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿ ರೈತರು ಇಂದು ದಿ.24 ಸೋಮವಾರ ತಿಕೋಟಾದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡರು ಕರೆನೀಡಿದ್ದಾರೆ.
ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ತುಬಚಿ ಬಬಲೇಶ್ವರ ಯೋಜನೆಗೆ ಜಾಕವೆಲ್ ಸ್ಥಳದಲ್ಲಿ ಪದೇ ಪದೇ ಅಡ್ಡಿಪಡಿಸುತ್ತಿರುವ ಕೆಲವು ವ್ಯಕ್ತಿಗಳನ್ನು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಿಕೋಟಾ ತಾಲ್ಲೂಕಿನ ರೈತರ ಪ್ರತಿಭಟನೆ ಹಾಗು ತಹಶೀಲ್ದಾರ ಅವರಿಗೆ ಮನವಿ ನೀಡಲಾಗುವುದು.
ಎಲ್ಲ ರೈತರು ತಪ್ಪದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಹಾಗೂ ರೈತ ಮುಖಂಡ ಯಾಕುಬ್ ಜತ್ತಿ ತಿಳಿಸಿದ್ದಾರೆ.

