ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಇಂಗ್ಲೀಷ ವ್ಯಾಮೋಹದಿಂದ ಕನ್ನಡ ಮರೆಯಾಗುತಿದೆ, ಕನ್ನಡ ಬಾಷೆ ಉಳುವಿಗಾಗಿ ಪ್ರಾಥಮಿಕ ಹಂತದಲ್ಲಿ ಕನ್ನಡ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದ ಪ.ಪಂ ಅಧ್ಯಕ್ಷ ಸಾದೀಕ ಸುಂಬಡ ಹೇಳಿದರು.
ಪಟ್ಟಣದ ಗಣಪತಿ ಶಿಕ್ಷಣ ಸಂಸ್ಥೆಯ ರವಿ ಕನ್ನಡ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕದ ಗ್ರಾಮೀಣ ಬಾಗದ ಹಳ್ಳಿಗಳಲ್ಲಿ ಕನ್ನಡ ಶಾಲೆಗಳಿದ್ದು ಮತ್ತು ಕನ್ನಡ ಬಾಷೆ ಉಳಿವಿಗಾಗಿ ಕರ್ನಾಟಕದಲ್ಲಿ ಮೊದಲು ಕನ್ನಡ ಬಾಷೆಗೆ ಹೆಚ್ಚಿನ ಆದ್ಯತೆ ಕನ್ನಡ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು ಹೇಳಿದರು.
ಪ್ರಜಾಪೀತ ಬ್ರಹ್ಮಕುಮಾರಿ ರೇಣುಕಾ ಅಕ್ಕನವರು ಮಾತನಾಡಿ, ಉತ್ತಮ ಸಮಾಜ ನಿರ್ಮಾಣವಾಗಬೇಕು ಮಕ್ಕಳಲ್ಲಿ ಸಂಸ್ಕಾರ ಬೆಳೆಯಬೇಕು ಎಂದರೆ ಶಿಕ್ಷಣದ ಜೊತೆಗೆ ಸಂಸ್ಕಾರವು ಅವಶ್ಯಕತೆ ಇದೆ. ಅದಕ್ಕೆ ಪಾಲಕರು ಮತ್ತು ಶಿಕ್ಷಕರು ಸಂಸ್ಕಾರವನ್ನು ಕಲಿಸಬೇಕು ಎಂದು ಹೇಳಿದರು.
ಸಾನಿದ್ಯ ವಹಿಸಿದ ವಿರಕ್ತಮಠದ ಜಗದೇವ ಮೊಲ್ಲಿಬೊಮ್ಮಯ್ಯ ಮಹಾಸ್ವಾಮಿಜಿ, ರವಿ ಹೊಸಮನಿ, ಶಿಕ್ಷಕ ಶಂಕರ ದೇವರಮನಿ ಮುಂತಾದವರು ಮಾತನಾಡಿದರು.
ಇದೆ ಶಾಲೆಯಲ್ಲಿ ಕಲಿತು ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆದುಕೊಂಡ ಸಿದ್ದಾರೊಢ ಕೂಡಿ ಅವರನ್ನು ವಿಶೇಷವಾಗಿ ಸನ್ಮಾನಿಸಿ ಅಬಿನಂದಿಸಿದರು.
ಸಂಸ್ಥೆಯ ಅಧ್ಯಕ್ಷೆ ಕವಿತಾ ನಾವಿ, ಮುಖಂಡರಾದ ಶ್ರೀಶೈಲ ಭೋವಿ, ಸಾವಯವ ಕೃಷಿ ರೈತ ಸುನೀಲ ನಾರಯಣಕರ, ಪ.ಪಂ ಸದಸ್ಯ ಚಂದ್ರಕಾಂತ ಹಳೆಮನಿ, ಚಂದ್ರಕಾಂತ ಕಾಂಬಳೆ, ರಾಹುಲ ಯಂಟಮಾನ, ಉಮರ ಬಿಳವಾರ, ಭಾಗ್ಯವಂತ ಆಲಮೇಲಕರ, ಅವಧೂತ ಬಂಡಗಾರ, ಶಂಕರಲಿಂಗ ಜಮಾದಾರ, ಶಿಕ್ಷಕ ಉಮೇಶ ಕುಂಬಾರ ಹಾಗೂ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.
ನಂತರ ಮಕ್ಕಳಿಂದ ಸಂಸ್ಕ್ರತಿಕ ಕಾರ್ಯಕ್ರಮ ಜರುಗಿದವು.

