ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಹಿಳೆಯರಿಗೆ ಸಾಕಷ್ಟು ಸವಾಲುಗಳಿರುತ್ತವೆ. ಕೃಷಿಯಲ್ಲಿ ಇಂದು ಪುರುಷರಷ್ಟೇ ಮಹಿಳೆಯೂ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದು, ಕುಟುಂಬ ನಿರ್ವಹಣೆ ಜೊತೆಗೆ ಕೃಷಿಯ ಕೆಲಸಗಳಲ್ಲೂ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದು ಕೆವಿಕೆ ಮುಖ್ಯಸ್ಥ ಡಾ. ಶಿವಶಂಕರಮೂರ್ತಿ ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ, ಆತ್ಮಾ ಇಂಡಿ ಇವರ ಸಹಯೋಗದೊಂದಿಗೆ “ಅಂತರಾಷ್ಟ್ರೀಯ ಮಹಿಳಾ ದಿನ”
ಹಾಗೂ ಕಿಸಾನ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪ ಯೋಜನಾ ನಿರ್ದೆಶಕರು ಆತ್ಮಾ ಎಸ್. ಕೆ. ಬಿರಾದಾರ ಮಾತನಾಡಿ ಮಹಿಳೆಯರು ತಮ್ಮ ಹಕ್ಕುಗಳನ್ನು ಸಂರಕ್ಷಿಸುವುದರ ಜತೆಗೆ ಕರ್ತವ್ಯದ ಜಾಗೃತಿ ಪಡೆಯುವದು ಕೂಡ ಅವಶ್ಯಕ ಕೃಷಿ ಕ್ಷೇತ್ರದಲ್ಲಿ ಮಹಿಳೆ ಪುರುಷನಷ್ಟೆ ಮುಖ್ಯ ಪಾತ್ರ ವಹಿಸಬಲ್ಲಳು ಎಂಬುದು ಎಲ್ಲರಲ್ಲೂ ಮೂಡಿ ಬರಬೇಕಾಗಿದೆ ಎಂದರು.
ಡಾ.ಪ್ರೇಮ ಚಂದ್ ಯು. ಅಧ್ಯಕ್ಷರು ಕೃಷಿಕ ಸಮಾಜದ ಶ್ರೀಮತಿ ದಾನಮ್ಮಗೌಡತಿ, ನಿವೃತ್ತ
ಪ್ರಧಾನ ವ್ಯವಸ್ಥಾಪಕರು, ಎಸ್.ಬಿ.ಐ. ಬ್ಯಾಂಕ್, ಮುಕುಂದ್ ಕಾಂಬಳೆ, ಅಧ್ಯಕ್ಷರು, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಇಂಡಿ ಶ್ರೀಮತಿ ಗಂಗಾಬಾಯಿ ಗಲಗಲಿ
ಮಾತನಾಡಿದರು.
ಮಹಿಳಾ ಸಾಧಕರಾದ ಅಧ್ಯಕ್ಷರು, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಇಂಡಿ , ಶ್ರೀಮತಿ ಗಂಗಾಬಾಯಿ, ಶ್ರೀಮತಿ ಭಾರತಿ ಮೇಡೆದಾರ,
ಕೃಷಿ ಪಂಡಿತ ಪ್ರಶಸ್ತಿ ವಿಜೇತ ರೈತ ಮಹಿಳೆ, ಶ್ರೀಮತಿ ಅನಿತಾ ಪಾಟೀಲ್, ಮಹಿಳಾ ಉದ್ಯಮಿಗಳು ಶ್ರೀಮತಿ ವಿಜಯಲಕ್ಷ್ಮಿ ಬೊಳೆಗಾಂವ,
ಬಾಗ್ಯ ನಿಲೂರೆ, ರೇಖಾ ಹೊಸಮನಿ, ಶ್ರೀಮತಿ ಮಾಲುಬಾಯಿ, ಶ್ರೀಮತಿ ಅಶ್ವಿನಿಬಾಯಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ೧೨೫ ಕ್ಕಿಂತ ಹೆಚ್ಚಿನ ರೈತ ಮಹಿಳೆಯರು
ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಡಾ. ಬಾಲಾಜಿ ನಾಯ್ಕ್ ಡಿ. ಮಜೀದ ಜಿ. ಡಾ.ವೀಣಾ ಚಂದಾವರಿ ಡಾ. ಪ್ರಕಾಶ ಜಿ, ವಿಜ್ಞಾನಿ ಮತ್ತಿತರಿದ್ದರು.