ಉದಯರಶ್ಮಿ ದಿನಪತ್ರಿಕೆ
ವಿಜಯಪುರ: 2024-25 ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ರಾಷ್ಟ್ರ ಮಟ್ಟದ ಹಾಕಿ ಸ್ಪರ್ಧೆಗೆ ಕರ್ನಾಟಕ ರಾಜ್ಯ ತಂಡ ನಿಯೋಜಿಸಿದ್ದು, ವಿಜಯಪುರ ನಗರದ ಯು.ಜಿ.ಎಚ್.ಪಿ.ಎಸ್ ನಂ 5 ಶಾಲೆಯ ಸಹ ಶಿಕ್ಷಕ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಖಜಾಂಚಿ ಹಾಗೂ ಜಿಓಸಿಸಿ ಬ್ಯಾಂಕಿನ ನಿರ್ದೇಶಕರಾದ ಸೈಯ್ಯದ ಜುಬೇರ ಕೆರೂರ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟದ ನೌಕರರ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇವರು ರಾಷ್ಟ್ರ ಮಟ್ಟದ ಹಾಕಿ ತಂಡದಲ್ಲಿ ಆಯ್ಕೆಯಾಗಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಪೇಬ್ರುವರಿ 15 ರಿಂದ 28 ವರೆಗೆ ಆಂದ್ರಪ್ರದೇಶದ ಕಾಕಿನಾಡ ನಗರದ ಅಸ್ಟ್ರೋ ಟರ್ಫ ಹಾಕಿ ಡಿಎಸ್ಎ ಮೈದಾನದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ರಾಷ್ಟ್ರದ ವಿವಿಧ ರಾಜ್ಯಗಳ ಹಾಕಿ ತಂಡಗಳು ಭಾಗವಹಿಸುತ್ತಿದ್ದು, ಕರ್ನಾಟಕ ತಂಡ ಹಾಕಿ ಪಂದ್ಯದಲ್ಲಿ ಜಯಶಾಲಿಯಾಗಲಿ ಎಂದು ವಿಜಯಪುರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ, ಕಾರ್ಯದರ್ಶಿ ರಾಜಶೇಖರ ದೈವಾಡಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಬಿರಾದಾರ, ಬಿ.ಟಿ.ಗೌಡರ, ವಿಜಯಕುಮಾರ ಹತ್ತಿ, ಗಂಗಾಧರ ಜೇವೂರ, ನೀಜು ಮೇಲಿನಕೇರಿ, ವೀರಭದ್ರಪ್ಪ, ಅಜೀಜ ಅರಳಿಮಟ್ಟಿ, ಮಾಹಾಂತೇಶ ಪಾಟೀಲ, ಅರವಿಂದ ಹೂಗಾರ, ಬಿ.ಎಸ್.ಮಜ್ಜಗಿ, ಚನ್ನಯ್ಯ ಮಠಪತಿ, ಎಸ್.ಎಸ್.ಸೊನಗಿ, ಮಂಜುನಾಥ ಅರೆಶಂಕರ, ಬಶೀರ್ ನದಾಪ್, ಬಸವರಾಜ ಗಿರಿನಿವಾಸ ಶುಭ ಹಾರೈಸಿದ್ದಾರೆ.

