ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗ ನ್ಯಾಯಾಲಯ ಪೀಠ-೨ರ ವಿಚಾರಣೆಯನ್ನು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿರುವ ಆಯೋಗದ ಪೀಠದಲ್ಲಿ ಫೆ.೧೨ ರಂದು ಏರ್ಪಡಿಸಲಾಗಿದೆ.
ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಕಕ್ಷಿದಾರರು ಹಾಜರಾಗಬಹುದು.
ಈ ಹಿಂದೆ ಕಳುಹಿಸಿದ್ದ ನೋಟಿಸಿನಲ್ಲಿ ʼಬೆಳಗಾವಿ ಪೀಠʼ ಎಂದು ನಮೂದಿಸಿರುವುದನ್ನು ಕರ್ನಾಟಕ ಮಾಹಿತಿ ಆಯೋಗದ ʼನ್ಯಾಯಾಲಯ ಪೀಠ -೨ ʼ ಎಂದು ಓದಿಕೊಳ್ಳಲು ಆಯೋಗದ ಕಾರ್ಯದರ್ಶಿಗಳಾದ ಸುಷಮಾ ಗೋಡಬೋಲೆ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.