ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಮೀಪದ ಉಮರಜದ ಶ್ರೀ ರೇವಣಸಿದ್ದೇಶ್ವರ ಜಾತ್ರೆಯಲ್ಲಿ ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು.
ಮಂಗಳವಾರದ ನಸುಕಿನ ಜಾವ ೪ ಗಂಟೆಯಿಂದ ಸಾಮೂಹಿಕವಾಗಿ ಭೀಮಾ ನದಿಯಲ್ಲಿ ಮಿಂದ ಭಕ್ತರು ರೇವಣಸಿದ್ಧೇಶ್ವರ ದೇವಾಸ್ಥಾನದವರಗೆ ದೀರ್ಘದಂಡ ನಮಸ್ಕಾರ ಹಾಕಿದರು. ಭಾವೈಕ್ಯತೆ ಸಾರುವ ಎಲ್ಲ ಧರ್ಮದ ಕಿರಿಯರಿಂದ ಹಿರಿಯ ಎಲ್ಲ ವಯೋಮಾನದವರು ದೀರ್ಘದಂಡ ನಮಸ್ಕಾರವನ್ನು ಹಾಕಿ ದೇವರ ದರ್ಶನ ಪಡೆದರು.
ನಸುಕಿನ ಜಾವ ೬ ಗಂಟೆಗೆ ರೇವಣಸಿದ್ದೇಶ್ವರ ದೇವಾಸ್ಥಾನಕ್ಕೆ ಮಹಾಮಜ್ಜನ ಹಾಗೂ ೭ ಗಂಟೆಗೆ ಮಹಾರುದ್ರಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿತು. ಮುಂಜಾನೆ ೧೦ ಗಂಟೆಗೆ ವಿಶೇಷ ಆಹ್ವಾನಿತರ ಸಮ್ಮುಖದಲ್ಲಿ ಶ್ರೀ ಘೂಳೇಶ್ವರ ಮಹಾರಾಜರ ವಿರಚಿತ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.