ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ, ವಿಜಯಪುರದ ಸ್ನಾತಕ ಎನ್.ಇ.ಪಿ. ಕೋರ್ಸುಗಳಿಗೆ ಪೂರ್ಣಕಾಲಿಕೆ/ಅರೆಕಾಲಿಕೆ ಅತಿಥಿ ಉಪನ್ಯಾಸಕರು ಅವಶ್ಯವಿದ್ದು, ಆಸಕ್ತಿಯುಳ್ಳ ಅರ್ಹ ಪದವಿ ಹೊಂದಿದ ಅಭ್ಯರ್ಥಿಗಳಿಗೆ ನೇರ ಸಂದರ್ಶನವನ್ನು ಇದೇ ದಿ. ೧೮ ರಂದು ಬೆಳಿಗ್ಗೆ ೧೧:೦೦ ಗಂಟೆಗೆ ಇಲ್ಲಿಯ ವಿವಿಯ ಆಡಳಿತ ಭವನದ ಸಿಂಡಿಕೇಟ್ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿwww.kswu.ac.in£ÀÄß ಸಂಪರ್ಕಿಸಬಹುದು ಎಂದು ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ