ರಚನೆ
ಇಂದಿರಾ ಮೋಟೆಬೆನ್ನೂರ
ಬೆಳಗಾವಿ
ಉದಯರಶ್ಮಿ ದಿನಪತ್ರಿಕೆ
ಸತ್ಯ ಶಾಂತಿ ಅಹಿಂಸೆ ಆಯುಧಗಳ ಉಪಾಸಕ
ಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ
ನಿತ್ಯ ಭಜನೆ ಉಪವಾಸ ಪ್ರಾರ್ಥನೆಯ ಆರಾಧಕ
ಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ
ನಡೆದ ದಾರಿಯ ತುಂಬಾ ಹೆಜ್ಜೆ ಗುರುತು ಮೂಡಿಸಿ
ಸರಿದಾರಿ ತೋರಿದವನು
ತುಂಡು ಪಂಜೆ ಕೋಲು ಕಣ್ಣಿಗೊಂದು ಕನ್ನಡಕ
ಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ
ಮೆಟ್ಟಿದ ಮೆಟ್ಟು ಸವೆಸುತ ಸ್ವಾತಂತ್ರ್ಯ ಮೆಟ್ಟಿದ ಆಳರಸರ ಮೆಟ್ಟಿ ನಿಂತವನು
ಸತ್ಯಾಗ್ರಹ ತ್ಯಾಗದ ಸವಿಫಲ ದಾಸ್ಯ ಮುಕ್ತಿಕಾರಕ
ಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ
ನಟ್ಟಿರುಳಿನಲಿ ನಿರ್ಭೀತಳಾಗಿ ಒಂಟಿಯಾಗಿ ನಡೆವ ಹೆಣ್ಣಿನ ಸ್ವಾತಂತ್ರ್ಯದ ಕನಸು ಕಂಡವನು
ರಾಮರಾಜ್ಯದ ಕನಸ ನನಸಾಗಿಸಲು ಹೋರಾಡಿದ
ಜನನಾಯಕ ಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ
ಜಾತಿ ಪಾತಿಯ ಪಾಚಿ ಬಾಚಿ ತೆಗೆಯುತ ತಾಯಿ ಭಾರತಿಯಗರಿಮೆ ಪೊರೆದವನು
ದ್ವೇಷವಾರಿಸಿ ಹೃದಯ ಬೆಳಗುವ ಸ್ಫೂರ್ತಿದಾಯಕ ಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ
![1000959882](https://udayarashminews.com/wp-content/uploads/2025/02/1000959882.jpg)