ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ, ಸಮಾಜದಲ್ಲಿ ಉತ್ತಮ ಆಡಳಿತಕ್ಕೆ ಮತದಾನದ ಪಾತ್ರ ಅನನ್ಯವಾದದ್ದು ಎಂದು ಪ್ರಾಚಾರ್ಯೆ ಡಾ.ಆರ್.ಎಂ ಮಿರ್ದೆ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್ ಎಸ್ ಎಸ್, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಮೃತ್ ಸಮುದಾಯದ ಯೋಜನೆ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ದಿನಾಂಕ 24-01-2025 ಶುಕ್ರವಾರದಂದು ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಯುವ ಪೀಳಿಗೆ ಮತದಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚುನಾಯಿತ ಪ್ರತಿನಿಧಿಗಳ ಶೈಕ್ಷಣಿಕ ಅಗತ್ಯತೆಗಳು, ಸಾರ್ವಜನಿಕರಿಗೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ವಾಸ್ತವಿಕ ಸಮಗ್ರ ಮಾಹಿತಿ, ರಾಜಕೀಯ ಪಕ್ಷಗಳು ನೀಡುವ ಪ್ರಮುಖ ಭರವಸೆಗಳ ಮತ್ತು ಹೊಣೆಗಾರಿಕೆ ಬಗ್ಗೆ ಇಂದಿನ ವಿದ್ಯಾರ್ಥಿಗಳು ಅರಿಯುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಕ್ತ ನ್ಯಾಯಸಮ್ಮತ ಚುನಾವಣೆಗಾಗಿ ಮತದಾರರ ಪ್ರತಿಜ್ಞೆ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಡಾ.ಅನಿಲ್ ಬಿ.ನಾಯ್ಕ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ್, ನ್ಯಾಕ್ ಸಂಯೋಜಕ ಡಾ.ಕೆ ಮಹೇಶ್ ಕುಮಾರ್, ಎನ್ ಎಸ್ ಎಸ್ ಅಧಿಕಾರಿಗಳಾದ ಮಿಲನ್ ರಾಥೋಡ್, ಡಾ.ತರನ್ನುಮ್ ಜಬೀನ್ ಖಾನ್, ಉಪನ್ಯಾಸಕ ಭೀಮಸಿ ಮದರಖಂಡಿ, ಅಮೋಗಿ ಯಂಕವಗೋಳ, ಮಹಾವಿದ್ಯಾಲಯದ ಬೋಧನೆ ಬೋಧಕರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೊ.ಸಂತೋಷ ವಿ.ವಂಬಾಸೆ, ಕಾರ್ಯಕ್ರಮವನ್ನು ನಿರೂಪಿಸಿದರು.

