ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಮಟ್ಟಿಹಾಳ ಗ್ರಾಮದ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ನಾಗರದಿನ್ನಿ ಗ್ರಾಮದ ಹಣಮಂತಗೌಡ ಕುಬಕಡ್ಡಿ, ಉಪಾಧ್ಯಕ್ಷರಾಗಿ ಕುರುಬರದಿನ್ನಿ ಗ್ರಾಮದ ಮಾನಿಂಗಪ್ಪ ಬಿರಾದಾರ ಅವಿರೋಧವಾಗಿ ಆಯ್ಕೆಯಾದರು,
11 ಜನರ ಸದಸ್ಯರ ಬಲದ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ನಾಗರದಿನ್ನಿಯ ಹಣಮಂತಗೌಡ ಕುಬಕಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಕುರುಬರದಿನ್ನಿಯ ಮಾನಿಂಗಪ್ಪ ಬಿರಾದಾರ ನಾಮಪತ್ರ ಸಲ್ಲಿಸಿದರು. ಇವರ ವಿರುದ್ಧ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಪವನಕುಮಾರ ಮಣೂರ ಘೋಷಣೆ ಮಾಡಿದರು.
ಈ ವೇಳೆ ನಿರ್ದೇಶಕರಾಗಿ ಹಣಮಾಪೂರ ಗ್ರಾಮದ ಸಂಗಮೇಶ ಕುಬಕಡ್ಡಿ, ಹಣಮಂತ ಛಬ್ಬಿ, ಬಸವ್ವ ಹಡಪದ, ಬಾಗಾನಗರ ಗ್ರಾಮದ ಲಾಲಬಿ ದಡೆದ, ಉದಾಜಪ್ಪ ಪೂಜಾರಿ, ಮಟ್ಟಿಹಾಳ ಗ್ರಾಮದ ಮಲ್ಲಿಕಾರ್ಜುನ ಬಿರಾದಾರ, ಪರಸಪ್ಪ ಪೂಜಾರಿ, ನಾಗರದಿನ್ನಿ ಗ್ರಾಮದ ಪ್ರದೀಪ್ ಗೌಡ ಪಾಟೀಲ, ಕುರುಬರದಿನ್ನಿಯ ವಿಠ್ಠಲ ಮಾದರ ಎಲ್ಲ ಅವಿರೋಧವಾಗಿ ಆಯ್ಕೆಯಾದರು.
ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಪಿಕೆಪಿಎಸ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿಂಗನಗೌಡ ಬಿರಾದಾರ, ಮುತ್ತುಸಾಹುಕಾರ ಹಳ್ಳೂರ, ಬಸವರಾಜ ಬಿರಾದಾರ, ಶ್ರೀಕಾಂತ ಗಣಿ, ಮಹೇಶ ತೋಟಗೇರ, ಮಾನ್ಯೇಜರ್ ಮಲ್ಲಿಕಾರ್ಜುನ ವಾಲಿಕಾರ ಸೇರಿದಂತೆ ಹಣಮಾಪುರ, ಭಾಗಾನಗರ, ಮಟ್ಟಿಹಾಳ, ನಾಗರದಿನ್ನಿ, ಕುರಬರದಿನ್ನಿಯ ಗುರುಹಿರಿಯರು ಉಪಸ್ಥಿತರಿದ್ದರು.

