ಲೇಖನ
– ನಾಗಮಣಿ ಕುಮಾರ
ಬೆಂಗಳೂರು
ಉದಯರಶ್ಮಿ ದಿನಪತ್ರಿಕೆ
ನಾನು ಮೊನ್ನೆ ಶಿವಮೊಗ್ಗಕ್ಕೆ ಹೋದಾಗ ದೂರದ ಪರಿಚಿತರೂ ಹಿರಿಯ ಮಹಿಳೆ ಒಬ್ಬರು ಸಿಕ್ಕರು, ಹಿಂದೆ ಪಾಪ ಬಹಳ ಕಷ್ಟ ಪಟ್ಟಿದ್ದರು, ಈಗ ಮಕ್ಕಳ ಕಾಲಕ್ಕೆ ಚೆನ್ನಾಗಿದ್ದಾರೆ ನೋಡಿ ಖುಷಿಯಾಯಿತು.
ಅವರು ಹೇಳಿದ್ದು ಹೀಗೆ
ಈಗ ಚೆನ್ನಾಗಿದ್ದೇವೆ. ಹಿಂದೆ ಒಂದು ಕಾಲದಲ್ಲಿ ಬಹಳ ಕಷ್ಟಪಟ್ಟೆವು ಈಗ ಮಕ್ಕಳ ವಿದ್ಯಾಭ್ಯಾಸ ಎಲ್ಲ ಚೆನ್ನಾಗಿ ಆಗಿದೆ, ಅವರೆಲ್ಲಾ ತಮ್ಮ ಪಾಡಿಗೆ ತಾವು ಚೆನ್ನಾಗಿದ್ದಾರೆ, ಹೊಟ್ಟೆ ಬಟ್ಟೆಗೆ ತೊಂದರೆ ಇಲ್ಲ, ಎಲ್ಲಾ ದೇವರ ದಯೆ ಎಂದು ಕೈ ಮುಗಿದರು. ಅದಕ್ಕೆ ನಾನು ಸರಿಯಮ್ಮ ಹಿಂದೆ ಬಹಳ ಕಷ್ಟ ಪಟ್ಟಿದ್ರಿ ಈಗೆಲ್ಲಾ ಚೆನ್ನಾಗಿದ್ದೀರಲ್ಲ ಅಷ್ಟೇ ಸಾಕು ಬಿಡಿ ಅಂದೆ.
ಅದಕ್ಕೆ ಅವರು ನಿಮ್ಮಂತೆ ಎಲ್ಲರೂ ಖುಷಿ ಪಡಲ್ಲಮ ತುಂಬಾ ಹಂಗಿಸಿ ಮಾತಾಡುತ್ತಾರೆ. ಹಿಂದೆ ಹೇಗಿದ್ರೂ ಈಗ ನೋಡು ಹೇಗೆ ಆಡ್ತಾರೆ. ಅಲ್ಪಂಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿನಲ್ಲಿ ಕೊಡೆ ಹಿಡಿದಂಗೆ ಅಂತ ಮಾತಾಡ್ತಾರೆ.
ಯಾಕಮ್ಮ ಕಷ್ಟ ಪಡೋರ್ ಕಷ್ಟ ಪಡುತ್ತಾನೆ ಇರಬೇಕಾ…? ಅವರು ದುಡಿದು ಸಂಪಾದನೆ ಮಾಡಿ ಐಶ್ವರ್ಯ ವಂತಾತರಾಗುವುದು ಬೇಡವಾ, ಅಹಂಕಾರ ಬಂದಿದೆ ಅಂತ ಮಾತನಾಡುತ್ತಾರೆ. ಸ್ವಾಭಿಮಾನದಿಂದ ಬದುಕಿದರೆ ಅಹಂಕಾರನ ಮಾ ಎಂದು ಹೇಳಿ ತುಂಬಾನೇ ಬೇಜಾರ್ ಮಾಡ್ಕೊಂಡ್ರು ನನ್ನತ್ರ.
ಅದಕ್ಕೆ ನಾನು ಅಮ್ಮ ಯಾಕೆ ಯೋಚನೆ ಮಾಡ್ತೀರಾ ಈ ತರ ಮಾತಿಗೆಲ್ಲ ತಲೆ ಕೆಡಿಸ್ಕೋಬೇಡಿ ಈಗ ಚೆನ್ನಾಗಿದ್ದೀರಲ್ಲವ ಅಷ್ಟೇ ಸಾಕು ಈ ತರ ಮಾತನಾಡುವವರಿಗೆ ಕಷ್ಟದ ಮತ್ತೆ ಶ್ರಮದ ಬೆಲೆ ಗೊತ್ತಿರುವುದಿಲ್ಲ ಮೇಲಿರುವ ಭಗವಂತ ಎಲ್ಲರಿಗೂ ರಕ್ಷಣೆಯ ಕೊಡೆ ಹಿಡಿದಿರುತ್ತಾನೆ. ಅವನ ನೆರಳಲ್ಲಿ ಇರುವ ನಾವೆಲ್ಲರೂ ಒಂದೇ ಬಡವ ಬಲ್ಲಿದ ಎಂಬ ಬೇಧಭಾವ ಅವನ ಬಳಿ ಇರಲ್ಲ, ಇದೆಲ್ಲ ನಾವು ಮಾಡಿಕೊಂಡಿರುವುದು ಅಷ್ಟೇ, ಜಾಸ್ತಿ ಯೋಚನೆ ಮಾಡಬೇಡಿ ಮಾ ಯಾಕೆ ಅವರಷ್ಟೇ ಕೊಡೆ ಹಿಡಿಬೇಕಾ ಬೇರೆಯವರು ಹಿಡಿಯಬಾರದಾ..? ಸಿರಿವಂತರು ಕೊಡೆ ಹಿಡಿದರೆ ನಡೆಯುತ್ತೆ, ಪಾಪ ಬಡವರು ಕೊಡೆ ಹಿಡಿದರೆ ಆಡಿಕೊಳ್ಳುತ್ತಾರೆ. ನೋಡಿಮಾ ವೇದ ಸುಳ್ಳಾದರು ಗಾದೆ ಸುಳ್ಳಾಗುವುದಿಲ್ಲ ನಿಜ,
ಆದರೆ ಎಲ್ಲಾ ಗಾದೆಗಳು ಎಲ್ಲರಿಗೂ ಅನ್ವಯಿಸುವುದಿಲ್ಲ ಅಲ್ವಾ.
ನಿಮ್ಮ ಪಾಡಿಗೆ ನೀವು ಇದ್ದು ಬಿಡಿಮಾ, ಈ ರೀತಿ ಮಾತನಾಡುವವರನ್ನು ನಿರ್ಲಕ್ಷಿಸಿ ಅಷ್ಟೇ. ಎಂದು ಹೇಳಿ ಅವರಿಗೆ ಒಂದೆರಡು ಸಮಾಧಾನದ ಮಾತನಾಡಿದೆ.
ಆಗ ನನಗೆ ಅನಿಸಿದ್ದು
ಸ್ವಾಭಿಮಾನಿ.. ಅಹಂಕಾರಿನ..?