ರಚನೆ
ನಂದಿನಿ ಧರ್ಮರಾಜ್
ಉದಯರಶ್ಮಿ ದಿನಪತ್ರಿಕೆ
ಆಲಿಸಿ, ಪಾಲಿಸೆನ್ನ ಮಗುವೆ ಎನ್ನದೊಂದು ವಿನಂತಿ,
ನಿನ್ನ ಬಾಳ ನಗುವಿಗಾಗಿ ಮಾಡಬೇಕು ಈ ಸ್ತುತಿ,
ಲೋಕದ ಗೊಡವೆಗಳಿಗೆ ಹಾಕಿಕೋ ಪರಿಮಿತಿ,
ಲೋಲುಪತೆಯ ದಾರಿಯ ಮುಚ್ಚುವ ಛಾತಿ,
ವಿದ್ಯೆಗೆ ವಿನಯದಿಂದ ಭೂಷಣದ ಪ್ರತೀತಿ,
ನಡೆನುಡಿಯಲ್ಲಿ ಆವರಿಸಿದರೆ ನಿನಗೆ ನೀನೆ ಉನ್ನತಿ.
ನಿನ್ನಯ ಗೆಲುವಿಗೆ ನೀನೇ ಸಾರಥಿ,
ಆಗು ನೀ ಸರ್ವರಿಗೂ ಪ್ರೀತಿಯಿಂದ ಅಧಿಪತಿ.
ಸದ್ವಿಚಾರಗಳ ಹರಿದು ಬರುವ ಮಾಹಿತಿ,
ಹಂಚಬೇಕು ಪರಂಪರೆ ಸಂಸ್ಕೃತಿಯ ಜಾಗೃತಿ,
ಬೆಳಕಿನೆಡೆಗೆ ತೆರೆದಾಗ ಕತ್ತಲೆಯ ಅವನತಿ,
ಬಾನಂಗಳ ತಾರೆ ನೀ ಹೃದಯದಾ ಒಡತಿ.