ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ದೈಹಿಕ ಶಿಕ್ಷಕರ ಸೇವೆ ಅಮೂಲ್ಯ. ವಿದ್ಯಾರ್ಥಿಗಳ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ಸಾಕಷ್ಟು ಶ್ರಮಿಸುವವರು ದೈಹಿಕ ಶಿಕ್ಷಕರು ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ.ಕವಡಿ ಹೇಳಿದರು.
ತಾಲೂಕಿನ ಬಿದರಕುಂದಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ ಶಿಕ್ಷಕರಾದ ಎ.ಸಿ.ಕೆರೂರ, ಎಸ್.ಆರ್.ಸುಲ್ಪಿ, ವಿ.ಎಸ್.ತೆಗ್ಗಿ, ಎಲ್.ಎಂ.ಜೋಗಿ, ಎಂ.ಎಸ್.ನಾಟೆಕಾರ, ರುದ್ರಮ್ಮ ಟಕ್ಕಳಕಿ, ಶ್ರೀಶೈಲ್ ಅಂಗಡಿ, ವಿ.ಜಿ.ನಾಗರಾಳ, ಎಚ್.ವಾಯ್.ತೋಳಮಟ್ಟಿ, ಬಾಲಚಂದ್ರ ಮೇಟಿ, ಎಸ್.ಪಿ.ಹಂಡರಗಲ್ಲ ಇವರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಲೆಯ ಮುಖ್ಯೋಪದ್ಯಾಯ ಅನಿಲ ರಾಠೋಡ, ಎಸ್.ಎಸ್.ಲಮಾಣಿ, ಬಸಯ್ಯ ಹಿರೇಮಠ, ಪ್ರಾಣೇಶ ಯಾದವ ಇದ್ದರು. ಸಂಗಮೇಶ ಸಜ್ಜನ, ಎಂ.ಎಸ್.ಬಿರಾದಾರ, ಗುರು ಸಾಲಿಮಠ, ಚಂದ್ರು ಮನಗೂಳಿ ಕಾರ್ಯಕ್ರಮ ನಿರ್ವಹಿಸಿದರು.