ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಯ ಕರ್ನಾಟಕ ಸಂಘಟನೆ ಸಿಂದಗಿ ತಾಲುಕಾ ಘಟಕದ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮದಲ್ಲಿ ಆದೇಶ ಪತ್ರಗಳನ್ನು ವಿತರಣೆ ಮಾಡಲಾಯಿತು.
ಈ ವೇಳೆ ಅಧ್ಯಕ್ಷತೆಯನ್ನು ಜಿಲ್ಲಾ ವಕ್ತಾರ ಚನ್ನಪ್ಪಗೌಡ ಎಸ್. ಬಿರಾದಾರ ವಹಿಸಿದ್ದರು.
ತಾಲೂಕಾಧ್ಯಕ್ಷ ಸಂತೋಷ ಮನಗೂಳಿ, ಸಿದ್ರಾಮಪ್ಪ ಅವಟಿ, ರಮೇಶ ರಾಥೋಡ್, ನಾಗಣ್ಣ ಪಡೆಕನೂರು, ಭಿಮಾನಗೌಡ ಬಿರಾದಾರ, ಅಣ್ಣಾರಾಯ ವಾಲೀಕಾರ, ಮಹಾಂತೇಶ್ ನಾಗೋಜಿ, ಸಿದ್ದನಗೌಡ ಬಿರಾದಾರ, ಅಶೋಕ ಪಾಟೀಲ, ಬಸವರಾಜ ಅಲ್ಲಾಪುರ, ಶಿವಪುತ್ರ ಮಲ್ಲೇದ, ವಿನೋದ ಚಬನೂರ, ಶಂಕರಲಿಂಗ ಬಿರಾದಾರ, ಸಂಗಮೇಶ ಇಜೇರಿ ಸೇರಿದಂತೆ ಅನೇಕರಿದ್ದರು.