ಉದಯರಶ್ಮಿ ದಿನಪತ್ರಿಕೆ
ಇಂಡಿ: ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾ ನಂ. ೧ ರಲ್ಲಿ ಶ್ರೀ ಮಾತಾ ದುರ್ಗಾದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಬೃಹತ್ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲ ತಾಂಡಾಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಧರ್ಮದರ್ಶಿಗಳಾದ ಡಾ. ಜಗನೂ ಮಹಾರಾಜ ಅವರು ಮನವಿ ಮಾಡಿದರು.
ನಗರದ ನವಮಿ ಮಂಗಲ ಕಾರ್ಯಾಲಯದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುದೀರ್ಘ ಇತಿಹಾಸವಿರುವ ಈ ಧಾರ್ಮಿಕ ಕೇಂದ್ರದಲ್ಲಿ ಜುಲೈ ೧೪ರಂದು ಅದ್ಧೂರಿ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದ್ದಾರೆ.
ಶ್ರೀ ಮಾತಾ ದುರ್ಗಾದೇವಿ ದೇವಸ್ಥಾನವು ಸುಮಾರು ೧೯೪೮ ರಲ್ಲಿ ಸ್ಥಾಪನೆಯಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಈ ವರ್ಷವೂ ನಿಗಮದ ಸಹಯೋಗ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿAದ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದರು.
ಮAಗಳವಾರ, ಜುಲೈ ೧೪ ರ ಮಧ್ಯಾಹ್ನ ೧:೦೦ ಗಂಟೆಗೆ ಸರಿಯಾಗಿ ಮುಖ್ಯ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಅಂದು ಮಧ್ಯಾಹ್ನ ಗಂಗಾಪೂಜೆ, ಮಹಾ ಮಂಗಳಾರತಿ ಹಾಗೂ ವಿಶೇಷ ಧಾರ್ಮಿಕ ಸಭೆಗಳು ಜರುಗಲಿವೆ. ಅಂದು ಖ್ಯಾತ ಚಿತ್ರನಟ ಗೋವಿಂದ್ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ ಅವರು ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಿಗೆ ಮಹಾಪ್ರಸಾದ (ದಾಸೋಹ) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಬೃಹತ್ ಜಾತ್ರಾ ಮಹೋತ್ಸವದ ದಿವ್ಯ ಸನ್ನಿಧಾನವನ್ನು ಧರ್ಮದರ್ಶಿಗಳಾದ ಡಾ. ಜಗನೂ ಮಹಾರಾಜರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತಾಂಡಾ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಮುಖಂಡರು ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಹಾಗೂ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ:೯೪೪೮೪೪೧೯೬೫, ೯೯೦೦೧೦೪೪೬೧, ೯೯೧೬೮೪೨೨೨೬
ಹಡಲಸಂಗ ಪ್ರಕಾಶ ಮಹಾರಾಜರು, ನಿಂಬಾಜಿ ರಾಠೋಡ, ಸಂಜೀವ ಚವ್ಹಾಣ, ವಿಜಯ್ ರಾಠೋಡ, ಡಾ. ರಮೇಶ ರಾಠೋಡ, ರಾಜೇಶ ಪವಾರ ಮಾತನಾಡಿ ಕಾರ್ಯಕ್ರಮಕ್ಕೆ ಇಂಡಿ ತಾಲೂಕಿನಿಂದ ಕನಿಷ್ಠ ೨೦೦೦ ಜನರನ್ನು ಕರೆದೊಯ್ಯುವ ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರ ಭೀಮು ರಾಠೋಡ, ಶೇಖರ ನಾಯಿಕ್, ರಂಗನಾಥ ಚವ್ಹಾಣ, ಗಣಪತಿ ರಾಠೋಡ, ಅಶೋಕ ಜಾಧವ, ಬಾಳು ರಾಠೋಡ, ಕಿರಣ ರಾಠೋಡ ಸೇರಿದಂತೆ ಮತ್ತಿತರರು ಇದ್ದರು.

