ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಪಂಚಾಯತಿಯ ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗದಿಂದ ಪ್ರಸಕ್ತ 2024-25ನೇ ಸಾಲಿಗೆ ಆಧುನೀಕರಣ ತಾಂತ್ರಿಕ ತರಬೇತಿ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶದವರಿಗೆ ಮೋಟರ್ ರಿವೈಂಡಿಂಗ್, ಪ್ಲಂಬಿಂಗ್ ಆಂಡ್ ಸ್ಯಾನಿಟರಿ ಮತ್ತು ರಿಪೇರಿಂಗ್ ಆಂಡ್ ಸರ್ವಿಸಿಂಗ್ ಆಫ್ ಹೋಮ್ ಅಪ್ಲೈನ್ಸಿಸ್ ವೃತ್ತಿಗಳಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಒದಗಿಸಲಾಗುತ್ತಿದ್ದು, ಆಸಕ್ತ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು ನಿಗದಿತ ಅರ್ಜಿ ನಮೂನೆಯನ್ನು vijayapura.nic.in ವೆಬ್‍ಸೈಟ್ ಮೂಲಕ ಡೌನ್‍ಲೋಡ್ ಮಾಡಿಕೊಂಡು ಅಥವಾ ಕಚೇರಿಗೆ ಭೇಟಿ ನೀಡಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅವಶ್ಯಕ ದಾಖಲೆಗಳೊಂದಿಗೆ ದಿನಾಂಕ : 15-12-2024ರೊಳಗೆ ಉಪನಿರ್ದೇಶಕರ ಕಚೇರಿ, ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಸ್ಟೇಶನ್ ಬ್ಯಾಕ್ ರೋಡ, ಶಿಕಾರಖಾನೆ, ವಿಜಯಪುರ ಕಚೇರಿಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 9972162222 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.