ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿದ ಐಎಎಸ್ ಅಧಿಕಾರಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿರಿಯ ಐಎಎಸ್ ಅಧಿಕಾರಿ ಮತ್ತು ಕೃಷಿ ಇಲಾಖೆ ಆಯುಕ್ತರಾಗಿರುವ ವೈ. ಎಸ್. ಪಾಟೀಲ ಅವರು ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೋಳ್ಳಲು ಹೆಸರು ನೋಂದಾಯಿಸುವ ಮೂಲಕ ಅಧಿಕಾರಿ ವರ್ಗಕ್ಕೆ ಸ್ಪೂರ್ತಿಯಾಗಿದ್ದಾರೆ.
ವಿಜಯಪುರ ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್- -2024 ಮ್ಯಾರಾಥಾನ್ ನಲ್ಲಿ 5 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳಲು ಅವರು ಹೆಸರು ನೋಂದಣಿ ಮಾಡಿದ್ದಾರೆ. ಈ ಮುಂಚೆ ವಿಜಯಪುರ ಉಪವಿಭಾಗಾಧಿಕಾರಿಯಾಗಿ ಮತ್ತು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅವರು, ತೋಟಗಾರಿಕೆ ಇಲಾಖೆಯ ಆಯುಕ್ತರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಸದಾ ಲವಲವಿಕೆಯಿಂದ ಇರುವ ಹಿರಿಯ ಐಎಎಸ್ ಅಧಿಕಾರಿಯೂ ಆಗಿರುವ ವೈ. ಎಸ್. ಪಾಟೀಲ ಅವರು, ಕೊರೊನಾ ಲೌಕಡೌನ್ ಸಮಯದಲ್ಲಿ ಮಾಡಿರುವ ಸೇವೆ ಜನಮಾನಸದಲ್ಲಿ ಇಂದಿಗೂ ಸ್ಮರಣೀಯವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿ ಮತ್ತು ನಂತರ ಜಿಲ್ಲಾಧಿಕಾರಿಯಾಗಿದ್ದಾಗ ಅವರು ಮಾಡಿರುವ ಕೆಲಸಗಳನ್ನು ಇಂದಿಗೂ ಸಾರ್ವಜನಿಕರು ಸ್ಮರಿಸುತ್ತಿದ್ದಾರೆ.
ವೈ. ಎಸ್. ಪಾಟೀಲ ಅವರು ವೃಕ್ಷಥಾನ್ ಹೆರಿಟೇಜ್ ರನ್ ಓಟದಲ್ಲಿ ತಮ್ಮ ಹೆಸರು ನೋಂದಾಯಿಸಿರುವುದು ಜಿಲ್ಲೆಯ ಮತ್ತು ರಾಜ್ಯದ ಅಧಿಕಾರಿಗಳೂ ಕೂಡ ಪಾಲ್ಗೋಳ್ಳಲು ಸ್ಪೂರ್ತಿ ನೀಡಿದೆ.