Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸೆ.೬ರಂದು ಮಾಂಗಲ್ಯ ಭವನದಲ್ಲಿ ಗುರುಸ್ಮರಣೆ ಕಾರ್ಯಕ್ರಮ

ಬರಗಾಲ ಘೋಷಣೆಗೆ ಆಗ್ರಹಿಸಿ ಯಡ್ರಾಮಿ ಬಂದ್!

ಕೃಷ್ಣ-ವಾದಿರಾಜ ಮಠದಲ್ಲಿ ಧಾನ್ಯ ಪೂಜೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಂವಿಧಾನ ನೀಡಿದ ಅವಕಾಶಗಳು ಸ್ವಾರ್ಥ ಸಾಧನೆಗೆ ಬಳಕೆಯಾಗದಿರಲಿ
(ರಾಜ್ಯ ) ಜಿಲ್ಲೆ

ಸಂವಿಧಾನ ನೀಡಿದ ಅವಕಾಶಗಳು ಸ್ವಾರ್ಥ ಸಾಧನೆಗೆ ಬಳಕೆಯಾಗದಿರಲಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಭಾರತ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಬಸವರಾಜ್ ಕೌಲಗಿ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಬಡತಾಯಿಯ ಮಗನೊಬ್ಬ ಜಿಲ್ಲಾಧಿಕಾರಿಯಾಗುವ ಕನಸು ಕಾಣುವುದಕ್ಕೆ ಹಾಗೂ ಕಂಡಂತ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿಸಿದ್ದು ಭಾರತದ ಸಂವಿಧಾನ. ಜಗತ್ತಿನ ಶ್ರೇಷ್ಠ ಸಂವಿಧಾನ ಎಂದು ಗುರುತಿಸಿಕೊಳ್ಳುವ ನಮ್ಮ ಸಂವಿಧಾನ ಇಲ್ಲದೇ ಹೋಗಿದ್ದರೆ ಈ ದೇಶದ ಸ್ಥಿತಿ ಪಾತಾಳ ಗರಿಡಿಯಂತಾಗುತ್ತಿತ್ತು ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಹೇಳಿದರು.
ನಗರದ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸಂವಿಧಾನ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ಒಂದು ದೇಶದ ಆಡಳಿತ ಸೂತ್ರ ಹೇಗಿರಬೇಕು, ದೇಶದ ಪ್ರಜೆಗಳಿಗೆ ಯಾವ ರೀತಿಯ ಹಕ್ಕುಗಳಿರಬೇಕು, ಹಕ್ಕುಗಳಿಗೆ ಪ್ರತಿಯಾಗಿ ಎಂಥಹ ಕರ್ತವ್ಯಗಳನ್ನು ನಾವು ಮಾಡಬೇಕು ಎನ್ನುವುದನ್ನು ತಿಳಿಸಿಕೊಡುವ ಭಾರತೀಯ ಸಂವಿಧಾನ ಜಗತ್ತು ಕಂಡಂತ ಅತ್ಯುತ್ತಮವಾದ ಸಂವಿಧಾನ ಎಂದು ಗುರುತಿಸಿಕೊಳ್ಳುತ್ತದೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಬೇರೆ ಬೇರೆ ದೇಶಗಳ ಸಂವಿಧಾನಗಳನ್ನು ಓದಿ ಅರ್ಥೈಸಿಕೊಂಡು ನಮ್ಮ ದೇಶಕ್ಕೆ ಎಂಥಹ ಸಂವಿಧಾನ ಬೇಕು ಎನ್ನುವುದನ್ನು ತಿಳಿಸಿಕೊಟ್ಟರು. ಅಸ್ಪೃಶ್ಯತೆಯ ಬೆಂಕಿಯಲ್ಲಿ ಸ್ವತಃ ಬೆಂದಿದ್ದ ಬಾಬಾಸಾಹೇಬರು ಭಾರತದ ಸಂವಿಧಾನ ರಚನೆಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ನಿಭಾಯಿಸುವುದರೊಂದಿಗೆ ಸಮಾನತೆಯ ಸಂವಿಧಾನ ಜಾರಿಯಾಗುವುದಕ್ಕೆ ಕಾರಣರಾದರು. ಇಷ್ಟು ಅದ್ಭುತವಾದ ಸಂವಿಧಾನವನ್ನು ಪಡೆದುಕೊಂಡಿದ್ದರೂ ಸಹ ಅದರ ಆಶಯವನ್ನು ಪೂರ್ಣಗಳಿಸುವಲ್ಲಿ ಭಾರತೀಯರು ಇನ್ನೂ ಯಶಸ್ವಿಯಾಗುತ್ತಿಲ್ಲ ಎನ್ನುವುದು ಖೇದಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತ ಸಂವಿಧಾನ ನಮಗೆ ನೀಡಿರುವ ಅವಕಾಶಗಳನ್ನು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳದೆ, ಸಮಾಜ ಸುಧಾರಣೆಗೆ, ದೇಶದ ಅಭಿವೃದ್ಧಿಗೆ, ಸಂವಿಧಾನದ ಆಶಯಗಳ ಈಡೇರಿಕೆಗೆ ಬಳಸಿಕೊಂಡಿದ್ದೇ ಆದಲ್ಲಿ ಇಡೀ ಜಗತ್ತಿಗೆ ಭಾರತ ಹಿರಿಯಣ್ಣನಾಗುತ್ತಾನೆ. ಆ ನಿಟ್ಟಿನಲ್ಲಿ ನಮ್ಮ ಯುವಕರು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನವಜೀವನ ಬ್ಯಾಂಕ್‌ನ ಮ್ಯಾನೇಜರ್ ವಿ.ಡಿ.ಮಾದನಶೆಟ್ಟಿ, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಮಾತನಾಡಿದರು.
ವಿದ್ಯಾರ್ಥಿನಿ ಶೃತಿ ವಾಲೀಕಾರ ಪ್ರಾರ್ಥಿಸಿದರು, ಉಪನ್ಯಾಸಕ ರಮೇಶ ಬಾಗೇವಾಡಿ ಸ್ವಾಗತಿಸಿದರು, ಶರಣಗೌಡ ಪಾಟೀಲ್ ನಿರೂಪಿಸಿದರು, ರವಿ ಕಲ್ಲೂರಮಠ ವಂದಿಸಿದರು.

ಸಿಬ್ಬಂದಿ ಬಳಗದಿಂದ ಸನ್ಮಾನ

ಇದೇ ಸಂದರ್ಭದಲ್ಲಿ ಸ್ವದೇಶಕ್ಕೆ ಆಗಮಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಅವರನ್ನು ಎಕ್ಸಲಂಟ್ ಕಾಲೇಜಿನ ಸರ್ವ ಸಿಬ್ಬಂದಿ ಬಳಗ, ವಿದ್ಯಾರ್ಥಿ ನಿಲಯದ ನಿಲಯಪಾಲಕರು ಸನ್ಮಾನಿಸಿ ಅಭಿನಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸೆ.೬ರಂದು ಮಾಂಗಲ್ಯ ಭವನದಲ್ಲಿ ಗುರುಸ್ಮರಣೆ ಕಾರ್ಯಕ್ರಮ

ಬರಗಾಲ ಘೋಷಣೆಗೆ ಆಗ್ರಹಿಸಿ ಯಡ್ರಾಮಿ ಬಂದ್!

ಕೃಷ್ಣ-ವಾದಿರಾಜ ಮಠದಲ್ಲಿ ಧಾನ್ಯ ಪೂಜೆ

ಸಾಧನೆಗೆ ಬಿಂದುವಿನಷ್ಟಿರುವ ಬಡತನ ಅಡ್ಡಿಯಾಗದಿರಲಿ :ಡಾ.ಜ್ಯೋತಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸೆ.೬ರಂದು ಮಾಂಗಲ್ಯ ಭವನದಲ್ಲಿ ಗುರುಸ್ಮರಣೆ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಬರಗಾಲ ಘೋಷಣೆಗೆ ಆಗ್ರಹಿಸಿ ಯಡ್ರಾಮಿ ಬಂದ್!
    In (ರಾಜ್ಯ ) ಜಿಲ್ಲೆ
  • ಕೃಷ್ಣ-ವಾದಿರಾಜ ಮಠದಲ್ಲಿ ಧಾನ್ಯ ಪೂಜೆ
    In (ರಾಜ್ಯ ) ಜಿಲ್ಲೆ
  • ಸಾಧನೆಗೆ ಬಿಂದುವಿನಷ್ಟಿರುವ ಬಡತನ ಅಡ್ಡಿಯಾಗದಿರಲಿ :ಡಾ.ಜ್ಯೋತಿ
    In (ರಾಜ್ಯ ) ಜಿಲ್ಲೆ
  • ಸೆ.6 ರಂದು ಮಹಿಳೆಯರಿಗಾಗಿ ಪ್ರೋಮೋ ರನ್
    In (ರಾಜ್ಯ ) ಜಿಲ್ಲೆ
  • ಶ್ರೀ ಬಿ.ಎಂ.ಪಾಟೀಲ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ
    In (ರಾಜ್ಯ ) ಜಿಲ್ಲೆ
  • ಹಿರೇಮನಿ ದಂಪತಿ ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೆ
    In (ರಾಜ್ಯ ) ಜಿಲ್ಲೆ
  • ತಾಲೂಕಾಡಳಿತದ ವೈಫಲ್ಯ ಖಂಡಿಸಿ ಡಿಎಸ್ಸೆಸ್ ಅರೆಬೆತ್ತಲೆ ಮೆರವಣಿಗೆ
    In (ರಾಜ್ಯ ) ಜಿಲ್ಲೆ
  • ಬಿಜೆಪಿ ರೈತಮೋರ್ಚಾ ಧರಣಿ ಸತ್ಯಾಗ್ರಹ ಅಂತ್ಯ
    In (ರಾಜ್ಯ ) ಜಿಲ್ಲೆ
  • ಸಂಗೊಳ್ಳಿ ರಾಯಣ್ಣ ಕನ್ನಡ ನಾಡಿನ ಕಟ್ಟಾಳು :ಶಾಸಕ ಪಾಟೀಲ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.