ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಬಿಜೆಪಿ ನಗರ ಮಂಡಲದ ಪ್ರಕೋಷ್ಟಕ ಸಂಯೋಜಕರಾಗಿ ಅರವಿಂದ ರಾಮಸಿಂಗ್ ಲಮಾಣಿ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳನ್ನಾಗಿ ದೇವೇಂದ್ರ ಜಗದೇವ ಹಡ್ಲಗಿ ಅವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಗಿದೆ. ಭಾರತಿ ಶಿವಾನಂದ ಬೂಯ್ಯಾರ ಅವರನ್ನು ಜಿಲ್ಲಾ ಪ್ರಕೋಷ್ಟಕ ಸದಸ್ಯರನ್ನಾಗಿ ನಿಯುಕ್ತಿಗೊಳಿಸಲು ನಗರ ಮಂಡಲದಿಂದ ಜಿಲ್ಲಾ ಘಟಕಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ನಗರ ಮಂಡಲ ಅಧ್ಯಕ್ಷರಾದ ಶಂಕರ ಹೂಗಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
