ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಹೂವಿನಹಳ್ಳಿ ಗ್ರಾಮದ ಭಾಗಮ್ಮ ಗುರುಶಾಂತಗೌಡ ಬಿರಾದಾರ ದಂಪತಿ ತಮಗೆ ಬಂದಂತ ೧೨ ತಿಂಗಳ ಗ್ರಹಲಕ್ಷ್ಮಿ ಹಣವನ್ನು ಕೂಡಿಟ್ಟು ನವರಾತ್ರಿ ನಿಮಿತ್ಯ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ದೇವಿ ಮೂರ್ತಿಗೆ ೨೫೦ ಗ್ರಾಮ (೨೫ ತೊಲಿ) ಬೆಳ್ಳಿ ಕೀರಿಟ ಮಾಡಿಸಿ ಮಾದರಿಯಾಗಿದ್ದಾರೆ.
ಈ ವಿಷಯ ತಿಳಿದು ಗ್ರಾಮಕ್ಕೆ ಬೇಟಿ ನೀಡಿದ ಶಾಸಕ ಅಶೊಕ ಮನಗೂಳಿ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.
ನಂತರ ಶಾಸಕ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೇಸ್ ಪಕ್ಷ ಚುನಾವಣೆಯಲ್ಲಿ ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಯ ಲಾಭವನ್ನು ರಾಜ್ಯದ ೧.೬೦ ಕೋಟಿ ಫಲಾನುಭವಿಗಳು ಪಡೆದುಕೊಂಡಿದ್ದಾರೆ ಈ ಯೋಜನೆ ಯಾವುದೆ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.
ಹುವಿನಹಳ್ಳಿ ಗ್ರಾಮದ ಭಾಗಮ್ಮ ದಂಪತಿ ತಮಗೆ ಬಂದಂತ ಗ್ರಹಲಕ್ಷ್ಮಿ ಹಣದಿಂದ ನವರಾತ್ರಿ ನಿಮಿತ್ಯ ಪ್ರತಿಷ್ಠಾಪಿಸಿರುವ ದೇವಿ ಮೂರ್ತಿಗೆ ೨೫೦ ಗ್ರಾಮ ಬೆಳ್ಳಿ ಕೀರಿಟ ಅರ್ಪಿಸಿದ್ದು ಅವರ ಈ ಕಾರ್ಯವನ್ನು ರಾಜ್ಯದ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿಯಲಿದೆ. ಹಾಗೂ ಭಾಗಮ್ಮ ದಂಪತಿ ಸೇವಾ ಕಾರ್ಯಕ್ಕೆ ರಾಜ್ಯದಲ್ಲಿಯೆ ಪ್ರೇರಣೆಯಾಗಿದ್ದಾರೆ ಎಂದರು.
ಡಾ| ಶ್ರೀಶೈಲ ಪಾಟೀಲ, ಆಲಮೇಲ ಪ.ಪಂ ಅಧ್ಯಕ್ಷ ಸಾಧೀಕ ಸುಂಬಡ ಮಾತನಾಡಿದರು.
ಪ.ಪಂ ಸದಸ್ಯ ಅಶೋಕ ಕೊಳಾರಿ, ಗ್ರಾಮದ ಹಿರಿಯರಾದ ಮಲಕನಗೌಡ ಪಾಟೀಲ, ಯಲ್ಲಪ್ಪ ಬುರಡ, ಅವಧೂತ ಬಂಡಗಾರ, ವಾಹಬ ಸುಂಬಡ, ಸೈಪನ ಪ್ಯಾಟಿ, ಜೀಲಾನಿ ನಾಟೀಕಾರ, ಅಪ್ಪುಗೌಡ ಪಾಟೀಲ, ಗುರು ಕಣ್ಣಿ ಮುಂತಾದವರು ಇದ್ದರು.

