ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಜಯದಶಮಿಯ ಪ್ರಯುಕ್ತ ಬಸವನ ಬಾಗೇವಾಡಿ ಮತಕ್ಷೇತ್ರದ ಮತದಾರ ಬಂಧುಗಳ ಹಾಗೂ ಸಾರ್ವಜನಿಕರ ಸಂಪರ್ಕದೊಂದಿಗೆ ನಡೆಯುವ ಪರಸ್ಪರ ಬನ್ನಿ ವಿನಿಮಯ ಕಾರ್ಯಕ್ರಮವು ಇದೇ ಅ.೧೩ ರವಿವಾರ ದಿವಸ ಕೊಲ್ಹಾರ ಪಟ್ಟಣದ ಸ್ವಗೃಹದಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಟಿ ನಡೆಸಿದ ಅವರು ಎಂದಿನಂತೆ ದಶಕಗಳಿಂದ ನಡೆದುಕೊಂಡು ಬಂದ ಮೈದುಂಬಿ ಹರಿಯುವ ಕೃಷ್ಣಾ ನದಿ ಮಾತೆಗೆ ಗಂಗಾ ಪೂಜೆಯನ್ನು ನೆರವೇರಿಸಲಾಗುವದು ಅಂದು ಗಂಗಾ ಮಾತೆಯ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊರ್ತಿ ಕೊಲ್ಹಾರ ಸೇತುವೆಯ ದಡದಲ್ಲಿ ಸುಮಂಗಲೆಯರ ಆರತಿ ಬೆಳಗುವದರೊಂದಿಗೆ ನದಿಗೆ ಬಾಗೀನ ಅರ್ಪಿಸಲಾಗುವದು ಎಂದರು.

