ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾನ್ಯ ಸರ್ವೋಚ್ಛ ನ್ಯಾಯಾಲಯ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ನಿರ್ದೇಶನದಂತೆ ಅಪಘಾತಕ್ಕೆ ಸಂಬಂಧಿಸಿದ ವಿವರವನ್ನು ಎಲ್ಲಾ ಆಸ್ಪತ್ರೆಗಳು e-ಆಂಖ ತಂತ್ರಾಂಶದಲ್ಲಿ (eಟeಛಿಣಡಿoಟಿiಛಿ ಆeಣಚಿiಟeಜ ಂಛಿಛಿiಜeಟಿಣ ಖeಠಿoಡಿಣs) ವರದಿ ಮಾಡುವುದು ಕಡ್ಡಾಯವಾಗಿರುತ್ತದೆ. ಈ ಕುರಿತು ಜಿಲ್ಲಾ ಮಾಹಿತಿ ಕೇಂದ್ರ ವಿಜಯಪುರ ವತಿಯಿಂದ ರಸ್ತೆ ಸಂಚಾರ ಅಪಘಾತಗಳನ್ನು ನಿರ್ವಹಿಸುತ್ತಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮಾಲೀಕರು, ವೈದ್ಯರು ಸಿಬ್ಬಂದಿಗಳಿಗೆ e-ಆಂಖ ತಂತ್ರಾಂಶದ ನಿರ್ವಹಣೆಯ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾ ಭವನದಲ್ಲಿ ೧೫-೧೦-೨೦೨೪ರಂದು ವಿಜಯಪುರ ನಗರ ಹಾಗೂ ವಿಜಯಪುರ ತಾಲೂಕು ವ್ಯಾಪ್ತಿಗೆ ಒಳಪಡುವ ಖಾಸಗಿ ಆಸ್ಪತ್ರೆಗಳು, ೧೬-೧೦-೨೦೨೪ರಂದು ಬಸವನ ಬಾಗೇವಾಡಿ, ಮುದ್ದೇಬಿಹಾಳ, ಇಂಡಿ ಹಾಗೂ ಸಿಂದಗಿ ತಾಲೂಕು ವ್ಯಾಪ್ತಿಗೆ ಒಳಪಡುವ ಖಾಸಗಿ ಆಸ್ಪತ್ರೆಗಳ ವೈದ್ಯರು ಸಿಬ್ಬಂದಿಗಳಿಗೆ ಬೆಳಿಗ್ಗೆ ೧೦ ಗಂಟೆಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿಗೆ ರಸ್ತೆ ಸಂಚಾರ ಅಪಘಾತ ನಿರ್ವಹಿಸುವ ಎಲ್ಲಾ ಖಾಸಗಿ ಆಸ್ಪತ್ರೆಗಳ ಮಾಲೀಕರು, ವೈದ್ಯರು ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು. ಸೂಕ್ತ ಕಾರಣ ಹಾಗೂ ಪೂರ್ವಾನುಮತಿಯಿಲ್ಲದೆ ಗೈರು ಹಾಜರಾದ ಆಸ್ಪತ್ರೆಗಳ ಕೆ.ಪಿ.ಎಂ.ಇ.ಎ ನೋಂದಣಿ ಅಮಾನತು ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
