ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೪-೨೫ನೇ ಸಾಲಿನ ಸೆರಬಲ್ ಪಾಲ್ಸಿ, ಮಸ್ಕ್ಯುಲರ್, ಡಿಸ್ಟೋಫಿ, ಪಾರ್ಕಿನ್ಸನ್ಸ್ ಮತ್ತು ಮಲ್ಟಿಪಲ್ ಸ್ಕ್ಲೆರೊಸಿಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಮಾಹೆಯಾನ ರೂ.೧,೦೦೦ ಪ್ರೋತ್ಸಾಹಧನವನ್ನು ನೀಡುವ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
೩೦-೧೦-೨೦೨೪ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕವಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿದವರನ್ನು ಹೊರತುಪಡಿಸಿ ಉಳಿದ ಮೇಲಿನ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಪಂಚಾಯತ ಕಾರ್ಯಾಲಯಗಳಲ್ಲಿ ಕಾರ್ಯಾನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ರವಿ ರಾಠೋಡ (ವಿಜಯಪುರ-೯೦೦೩೫೫೫೩೩೭), ಪರಶುರಾಮ ಬೋಸಲೆ (ಇಂಡಿ-೯೯೭೨೪೪೧೪೬೪), ಮುತ್ತುರಾಜ ಸಾತಿಹಾಳ (ಸಿಂದಗಿ-೯೯೮೦೦೧೯೬೩೫), ಎಸ್. ಡಿ ಬಿರಾದಾರ (ಬಸವನ ಬಾಗೇವಾಡಿ- ೮೭೨೨೧೩೫೬೬೦) ಹಾಗೂ ಎಸ್.ಕೆ. ಘಾಟಿ (ಮುದ್ದೇಬಿಹಾಳ- ೯೭೪೦೬೮೨೯೭೯) ಹಾಗೂ ಕಚೇರಿ ದೂರವಾಣಿ ಸಂಖ್ಯೆ೦೮೩೫೨-೭೯೬೦೬೦ ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳಾದ ಶ್ರೀಮತಿ ಸವಿತಾ ಕಾಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
