ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಶಿವಾಜಿ ಗಲ್ಲಿಯಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ಅ.೧೧ ರಂದು ಸಂಜೆ ೬ ಗಂಟೆಗೆ ನವರಾತ್ರಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸವರು. ಅಧ್ಯಕ್ಷತೆಯನ್ನು ಸಚಿವ ಶಿವಾನಂದ ಪಾಟೀಲ ವಹಿಸುವರು. ಮುಖ್ಯ ಅತಿಥಿಗಳಾಗಿ ಅಂಬಾಭವಾನಿ ದೇವಸ್ಥಾನದ ಅಧ್ಯಕ್ಷ ಯಮನೂರಿ ಬಿದರಕುಂದಿ, ಅತಿಥಿಗಳಾಗಿ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ, ಕೆಕೆಎಂಪಿ ಅಧ್ಯಕ್ಷ ಬಸವರಾಜ ಬಿಜಾಪುರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಪುರಸಭೆ ಸದಸ್ಯರಾದ ರವಿ ಪಟ್ಟಣಶೆಟ್ಟಿ, ಅಶೋಕ ಗುಳೇದ, ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಗಣ್ಯ ವ್ಯಾಪಾರಸ್ಥ ಶಿವಪುತ್ರ ಕೆಂಭಾವಿ, ಯುವ ಮುಖಂಡರಾದ ಬಸವರಾಜ ಕೋಟಿ, ಸಂಗಮೇಶ ಓಲೇಕಾರ, ರವಿ ಚಿಕ್ಕೊಂಡ, ಸುರೇಶ ಪಡಶೆಟ್ಟಿ, ಮುದಕಣ್ಣ ಗೊಳಸಂಗಿ ಆಗಮಿಸುವರು ಎಂದು ಅಂಬಾಭವಾನಿ ದೇವಸ್ಥಾನದ ನವರಾತ್ರಿ ಉತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.
